ಕಳೆದ ಚುನಾವಣೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಿಶ್ವನಾಥ್ ಸ್ಪರ್ಧಿಸಿದ್ದರು
ಬೆಂಗಳೂರು(ನ.09): ಮುಂದಿನ ವಿಧಾನಸಭಾ ಚುನಾವಣೆಗೆ ಕನಕಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಳೆದ ಬಾರಿ ಪೈಪೋಟಿ ಒಡ್ಡಿದ್ದ ಡಿ.ಎಂ.ವಿಶ್ವನಾಥ್ ಅವರೇ ಕಣಕ್ಕಿಳಿಯುವುದು ನಿಶ್ಚಿತವಾಗಿದೆ.ಬುಧವಾರ ಶೇಷಾದ್ರಿಪುರಂನಲ್ಲಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆದ ಕನಕಪುರ ವಿಧಾನಸಭಾ ಕ್ಷೇತ್ರದ ಮುಖಂಡರ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ವಿಶ್ವನಾಥ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಚುನಾವಣೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಡಿ.ಎಂ.ವಿಶ್ವನಾಥ್ ಸ್ಪರ್ಧಿಸಿದ್ದರು. ಏಳು ಸಾವಿರ ಮತಗಳ ಅಂತರದಿಂದ ಪರಭಾವಗೊಂಡಿದ್ದರು. ಈ ಬಾರಿಯೂ ಜೆಡಿಎಸ್ ನಿಂದ ವಿಶ್ವನಾಥ್ ಸ್ಪರ್ಧಿಸುವುದು ತೀರ್ಮಾನಿಸಲಾಗಿದೆ.
