ಆಕ್ಸಿಜನ್‌ ಕವಚ ಅಳವಡಿಸಿದ ಮಗುವನ್ನು ಸ್ಟ್ರೆಚರ್‌ ಕೊರತೆಯಿಂದಾಗಿ ತಂದೆಯೊಬ್ಬರು ತೋಳಿನಲ್ಲೇ ಎತ್ತಿಕೊಂಡು ಹೋದಂತಹ ಘಟನೆ ಹೈದರಾಬಾದ್‌ನ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಹೈದರಾಬಾದ್ (ಏ.01): ಆಕ್ಸಿಜನ್ ಕವಚ ಅಳವಡಿಸಿದ ಮಗುವನ್ನು ಸ್ಟ್ರೆಚರ್ ಕೊರತೆಯಿಂದಾಗಿ ತಂದೆಯೊಬ್ಬರು ತೋಳಿನಲ್ಲೇ ಎತ್ತಿಕೊಂಡು ಹೋದಂತಹ ಘಟನೆ ಹೈದರಾಬಾದ್ನ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಸರ್ಕಾರಿ ಸ್ವಾಮ್ಯದ ನೀಲೋಫರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದು, ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದರೆ, ಸ್ಟ್ರೆಚರ್ ಕೊರತೆಯಿಂದ ಈ ಘಟನೆ ಸಂಭವಿಸಿದೆ ಎಂಬ ವರದಿಯನ್ನು ಆಸ್ಪತ್ರೆ ನಿರಾಕಾರಿಸಿದೆ. ಘಟನೆಗೆ ಸಂಬಂಧಿಸಿದಂತೆ ಉಸಿರಾಟದ ಸಮಸ್ಯೆ ಹಿನ್ನೆಲೆ 18 ತಿಂಗಳ ಹೆಣ್ಣು ಮಗುವೊಂದು ಗುರುವಾರ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ, ನಂತರದಲ್ಲಿ ಮಗುವಿಗೆ ಎಕ್ಸ್ರೇ ಮಾಡಬೇಕಾಗಿದ್ದರಿಂದ ಮಗುವನ್ನು ಆಸ್ಪತ್ರೆ ಆವರಣದ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಮಗುವನ್ನು ಆಕೆಯ ತಂದೆ ಎತ್ತಿಕೊಂಡಿದ್ದರು ಹಾಗೂ ಆಕ್ಸಿಜನ್ ಸಿಲಿಂಡರ್ನ್ನು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಹಿಡಿದುಕೊಂಡಿದ್ದ ಎಂದ ಅವರು, ಮಾಧ್ಯಮಗಳಲ್ಲಿ ಬಂದಂತೆ ಸ್ಟ್ರೆಚರ್ ಕೊರತೆಯಿಂದ ಈ ರೀತಿ ನಡೆದಿಲ್ಲ. ಆಸ್ಪತ್ರೆಯಲ್ಲಿ ಸ್ಟ್ರೆಚರ್ಗಳು ಸಾಕಾಗುವಷ್ಟು ಇದೆ ಎಂದು ಆಸ್ಪತ್ರೆ ಹೇಳಿದೆ.
