Asianet Suvarna News Asianet Suvarna News

ಮೂಕಹುಡುಗಿ ಕಷ್ಟಪಟ್ಟು ದುಡಿದ ಹಣಕ್ಕೆ ಕವಡೆಕಾಸೂ ಕಿಮ್ಮತ್ತಿಲ್ಲವಾ..!? ಅಮಾಯಕಳ ಸಂಕಷ್ಟಕ್ಕೆ ಕಾರಣವಾಯ್ತು ನೋಟ್'ಬ್ಯಾನ್

ಮ್ಮ ಸರ್ಕಾರಗಳಿಗೆ 1.39 ಲಕ್ಷ ರೂಪಾಯಿ ಜುಜುಬಿ ಇರಬಹುದು, ಆದ್ರೆ ಅಮಾಯಕ ಮುಗ್ಧೆ ಹಲವಾರು ವರ್ಷಗಳ ಕಷ್ಟಪಟ್ಟು ಕೂಡಿಟ್ಟ ಹಣ ಈಗ ಬರೀ ಕಾಗದವಾಗಿದೆ. ಮೂಕ ಯುವತಿ ಮೂಕ ವೇದನೆ ಅನುಭವಿಸುವಂತಾಗಿದೆ.

story of a deaf and dumb girl of hassan suffering due to noteban

ಹಾಸನ: ಇದು ಹಾಸನದ ಗೌರಿಕೊಪ್ಪಲಿನ ಮೂಕ ಹುಡುಗಿಯ ಕಣ್ಣೀರಿನ ಕಥೆ. ಆಕೆಗೆ ಮಾತು ಬಾರದಿದ್ದರೂ ಕೆಲಸದಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ. ನ್ಯಾಯವಾಗಿ ದುಡಿದು ತನ್ನದೇ ಆದ ಸುಂದರ ಭವಿಷ್ಯ ಕಟ್ಟಿಕೊಳ್ಳಬೇಕು ಅನ್ನೋದು ಮೀನಾಕ್ಷಿಯ ಹಠವಾಗಿತ್ತು. ಹಾಗಾಗಿ ಆಕೆ ಮನೆಗೆಲಸ ಮಾಡುವುದರ ಜೊತೆಗೆ ಸರ್ಕಾರದಿಂದ ಪ್ರತಿ ತಿಂಗಳು ಬರುತ್ತಿದ್ದ ಅಂಗವಿಕಲ ವೇತನದ ಹಣವನ್ನ ಉಳಿತಾಯ ಮಾಡಿಕೊಂಡಿದ್ದಳು.. ಹೀಗೆ ಆಕೆ ಕಷ್ಟಪಟ್ಟು ದುಡಿದು ಉಳಿಸಿದ ಹಣ 1.39 ಲಕ್ಷ ರೂಪಾಯಿಯಾಗಿತ್ತು. ದುರಂತ ಎಂದರೆ ಆ ಹಣ ಈಗ ಬರೀ ಕಾಗದಕ್ಕೆ ಸಮವಾಗಿಬಿಟ್ಟಿದೆ.

story of a deaf and dumb girl of hassan suffering due to noteban

ಮೀನಾಕ್ಷಿ ಹೀಗೆ ಕೆಲವರ್ಷಗಳಿಂದ ಉಳಿತಾಯ ಮಾಡಿ ಇಟ್ಟುಕೊಂಡಿದ್ದ ಹಣ ಹಳೆಯ ನೋಟುಗಳ ಒಟ್ಟು ಮೌಲ್ಯ 1.39 ಲಕ್ಷ ರೂ. ಈ ಮುಗ್ಧ ಹುಡುಗಿಗೆ 500 ಮತ್ತು 1000 ರೂ ಮೌಲ್ಯದ ಹಳೆಯ ನೋಟು ಅಮಾನ್ಯವಾಗಿರುವ ವಿಚಾರವೇ ಗೊತ್ತಿಲ್ಲ. ಕೆಲ ದಿನಗಳಿಂದ ನೆರೆಹೊರೆಯವರು ಹೊಸ ನೋಟುಗಳನ್ನ ಹಿಡಿದುಕೊಂಡು ಮಾತಾನಾಡುವಾಗ ಸೂಕ್ಷ್ಮವಾಗಿ ಗಮನಿಸಿದ ಮೀನಾಕ್ಷಿಗೆ ಆಗ ವಿಷಯ ತಿಳಿದು ದಿಕ್ಕೇ ತೋಚದಂತಾಗಿದೆ. ತಾನು ಕಷ್ಟಪಟ್ಟು ಕೂಡಿಟ್ಟ ಹಣಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬ ವಿಚಾರ ಮೂಕ ಹುಡುಗಿ ಮೀನಾಕ್ಷಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಹೀಗೆ ಪ್ರಧಾನಿ ಮೋದಿಯವರ ನೋಟ್ ಬ್ಯಾನ್ ಎಫೆಕ್ಟ್'ನಿಂದ ಮೀನಾಕ್ಷಿ ಅಕ್ಷರಶಃ ತತ್ತರಿಸಿ ಹೋಗಿದ್ದಾಳೆ.

ನಮ್ಮ ಸರ್ಕಾರಗಳಿಗೆ 1.39 ಲಕ್ಷ ರೂಪಾಯಿ ಜುಜುಬಿ ಇರಬಹುದು, ಆದ್ರೆ ಅಮಾಯಕ ಮುಗ್ಧೆ ಹೀಗೆ ಹಲವಾರು ವರ್ಷಗಳ ಕಷ್ಟಪಟ್ಟು ಕೂಡಿಟ್ಟ ಹಣ ಈಗ ಬರೀ ಕಾಗದವಾಗಿದೆ. ಮೂಕ ಯುವತಿ ಮೂಕ ವೇದನೆ ಅನುಭವಿಸುವಂತಾಗಿದೆ.

ವರದಿ: ಹರೀಶ್, ಹಾಸನ

-----

 

Deaf & dumb girl from Hassan unaware of noteban set to lose her hard earned lifetime money

Hassan: This is the tragic story of innocent lady who is set to lose her hard earned lifetime money due to demonetisation. Meenakshi, a deaf & dumb girl from Gowrikoppalu village in Hassan, has a cash of over lakh rupees in old notes. This is purely hard earned money of Meenakshi. Despite the physical disability, Meenakshi earned his money by working as domestic help in various houses. She saved few money received from Government's fund for physically handicapped people. All this amounted for Rs. 1.30 lakh. But, it was in old currency notes. Sadly, Meenakshi was not aware of Demonetisation announced by govt. She came to know of this noteban only when she overheard neighbours talking about it. Now, banks doors are closed for exchanging old currency. Meenakshi is literally set to lose her lifetime earning. Can the Government hear this deaf girl's silent words?

Follow Us:
Download App:
  • android
  • ios