ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಹಾಸ್ಟೇನ್ ವಿಶ್ವವಿದ್ಯಾಲಯದ ಆವರಣ ಬಹುಪಾಲು ಜಲಾವೃತಗೊಂಡಿದ್ದು 200 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರಲ್ಲಿ ಇಬ್ಬರನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಲಾಗಿದೆ ಎಂದು ವಾಷ್ಟಿಂಗ್ಟನ್ ಭಾರತೀಯ ರಾಯಭಾರಿ ಹೇಳಿದ್ದಾರೆ.   

ನವದೆಹಲಿ (ಆ.28): ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಹಾಸ್ಟೇನ್ ವಿಶ್ವವಿದ್ಯಾಲಯದ ಆವರಣ ಬಹುಪಾಲು ಜಲಾವೃತಗೊಂಡಿದ್ದು 200 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರಲ್ಲಿ ಇಬ್ಬರನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಲಾಗಿದೆ ಎಂದು ವಾಷ್ಟಿಂಗ್ಟನ್ ಭಾರತೀಯ ರಾಯಭಾರಿ ಹೇಳಿದ್ದಾರೆ.

ತುರ್ತು ನಿಗಾ ಘಟಕಕ್ಕೆ ಸೇರಿಸಿದವರು ಶಾಲಿನಿ ಮತ್ತು ನಿಖಿಲ್ ಭಾಟಿಯಾ ಎಂದು ತಿಳಿದು ಬಂದಿದೆ. ಅವರ ಸಂಬಂಧಿಕರನ್ನು ಸಂಪರ್ಕಿಸಲಾಗಿದ್ದು, ಆದಷ್ಟು ಬೇಗ ಅವರು ಬರಲಿದ್ದಾರೆ ಎನ್ನಲಾಗಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟಿಸಿದ್ದು, ಭಾರತೀಯ ದೂತವಾಸರು ನಮ್ಮನ್ನು ಸಂಪರ್ಕಿಸಿದ್ದಾರೆ. 200 ಕ್ಕೂ ಹೆಚ್ಚೂ ಭಾರತೀಯ ವಿದ್ಯಾರ್ಥಿಗಳು ಹಾಸ್ಟೇನ್ ವಿವಿಯಲ್ಲಿ ನೀರಿನಲ್ಲಿ ಸಿಲುಕಿ ಹಾಕಿಕೊಂಡಿದ್ದು ಕುತ್ತಿಗೆ ಮಟ್ಟದವರೆಗೆ ನೀರು ಬಂದಿದೆ. ಅವರಿಗೆ ಆಹಾರವನ್ನು ಒದಗಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ದೂತವಾಸ ಕಚೇರಿ ತಿಳಿಸಿರುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

Scroll to load tweet…
Scroll to load tweet…
Scroll to load tweet…