ಕರ್ನಾಟಕದಿಂದ ಗೋವಾಗೆ ದಿನಸಿ, ತರಕಾರಿ ಪೂರೈಕೆ ಬಂದ್

First Published 1, Feb 2018, 10:14 AM IST
Stop Vegetable supply to Goa
Highlights

ಮಹದಾಯಿ ನೀರು ಹಂಚಿಕೆ ಸಂಬಂಧ ರೈತ ಮತ್ತು ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯ ಎಪಿಎಂಸಿ ಯಾರ್ಡ್‌ಗಳ ಗುಮಾಸ್ತರು ಹಾಗೂ ಹಮಾಲಿಗಳ ಸಂಘ ಬೆಂಬಲ ಸೂಚಿಸಿದೆ.

ಬೆಂಗಳೂರು: ಮಹದಾಯಿ ನೀರು ಹಂಚಿಕೆ ಸಂಬಂಧ ರೈತ ಮತ್ತು ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯ ಎಪಿಎಂಸಿ ಯಾರ್ಡ್‌ಗಳ ಗುಮಾಸ್ತರು ಹಾಗೂ ಹಮಾಲಿಗಳ ಸಂಘ ಬೆಂಬಲ ಸೂಚಿಸಿದೆ. ಅಲ್ಲದೆ, ಕರ್ನಾಟಕದಿಂದ ಗೋವಾಕ್ಕೆ ತರಕಾರಿ ಹಾಗೂ ದಿನಸಿ ಪದಾರ್ಥಗಳನ್ನು ಹೊತ್ತೊಯ್ಯುವ ಲಾರಿಗಳಿಗೆ ಲೋಡ್ ಮಾಡುವುದನ್ನು 4 ದಿನಗಳಿಂದ ಸ್ಥಗಿತಗೊಳಿಸಲಾಗಿದೆ.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಾರವಾರ ಜಿಲ್ಲೆಗಳೂ ಸೇರಿದಂತೆ ರಾಜ್ಯದ ಯಾವುದೇ ಎಪಿಎಂಸಿ ಯಿಂದ  ಗೋವಾಕ್ಕೆ ಹೋಗುವ ಲಾರಿಗಳಿಗೆ ಲೋಡ್ ಮಾಡದಂತೆ ಸಂಘದ ಸದಸ್ಯರಿಗೆ ಸೂಚಿಸಿರುವುದಾಗಿ ಸಂಘದ ಅಧ್ಯಕ್ಷ ಎಚ್.ವಿ.ಪರಮೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಕರ್ನಾಟಕದಿಂದ ಪ್ರತಿದಿನ 4 ಲಾರಿ ತರಕಾರಿ ಹಾಗೂ 6 ಲಾರಿ ದಿನಸಿ ಹೋಗುತ್ತದೆ.

loader