ಅನಾಮಧೇಯರು ಬರೆದಿರುವ ಈ ಪತ್ರದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷವಾಕ್ಯವಿದೆ.​

ವಾರಾಣಸಿ(ಮಾ. 22): ಬರುವ ಶುಕ್ರವಾರದಂದು ಪೂರ್ವಾಂಚಲದಲ್ಲಿ ಭಾರೀ ದಾಳಿ ನಡೆಯಲಿದ್ದು, ತಾಕತ್ತಿದ್ದರೆ ತಡೆಯಿರಿ ಎಂದು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಎಚ್ಚರಿಕೆ ನೀಡಿರುವ ಪತ್ರವೊಂದು ಪತ್ತೆಯಾಗಿದೆ. ಇಲ್ಲಿಯ ಮಿರ್ಜಾಮುರದ್ ಪ್ರದೇಶದಲ್ಲಿ ಪತ್ತೆಯಾಗಿರುವ ಈ ಪತ್ರದಲ್ಲಿ, "ಮಾರ್ಚ್ 24ರಂದು ಪೂರ್ವಾಂಚಲದಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುತ್ತೇವೆ. ತಡೆಯಿರಿ" ಎಂದು ಬರೆಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೂರ್ವಾಂಚಲವು ಉತ್ತರಪ್ರದೇಶದ ಪೂರ್ವಭಾಗದಲ್ಲಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ಪ್ರಭಾವ ಇಲ್ಲಿ ಅಧಿಕವಾಗಿದೆ. ಪತ್ರ ಸಿಕ್ಕಿರುವ ವಾರಾಣಸಿಯು ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾಗಿರುವುದೂ ಗಮನಾರ್ಹ.

ಅನಾಮಧೇಯರು ಬರೆದಿರುವ ಈ ಪತ್ರದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷವಾಕ್ಯವಿದೆ. ಉತ್ತರಪ್ರದೇಶದ ಪೊಲೀಸರು ಮತ್ತು ದೇಶದ ಗುಪ್ತಚರ ಸಂಸ್ಥೆಗಳು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸ್ಥಳೀಯ ಪತ್ರಿಕೆ ಅಮರ್ ಉಜಾಲಾದಲ್ಲಿ ತಿಳಿಸಲಾಗಿದೆ.