ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು ಕೇಂದ್ರ ಸರ್ಕಾರವು ಆಮ್ ಆದ್ಮಿ ಪಕ್ಷಕ್ಕೆ ಛೀಮಾರಿ ಹಾಕಿದೆ. ಶೇ.80 ರಷ್ಟು ಮಾಲಿನ್ಯಕ್ಕೆ ನಗರದಲ್ಲಿರುವ ತ್ಯಾಜ್ಯವೇ ಕಾರಣ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ನವದೆಹಲಿ (ನ.06): ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು ಕೇಂದ್ರ ಸರ್ಕಾರವು ಆಮ್ ಆದ್ಮಿ ಪಕ್ಷಕ್ಕೆ ಛೀಮಾರಿ ಹಾಕಿದೆ. ಶೇ.80 ರಷ್ಟು ಮಾಲಿನ್ಯಕ್ಕೆ ನಗರದಲ್ಲಿರುವ ತ್ಯಾಜ್ಯವೇ ಕಾರಣ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಮಾತನಾಡಿ, ಇಸ್ರೋ ಕಳುಹಿಸಿಕೊಟ್ಟಿರುವ ಸ್ಯಾಟಲೈಟ್ ಚಿತ್ರಗಳ ಪ್ರಕಾರ ಮಾಲಿನ್ಯ ಹೆಚ್ಚಿಸುವಲ್ಲಿ ನೆರೆಹೊರೆ ರಾಜ್ಯಗಳು ಶೇ.20 ರಷ್ಟು ಹೊಣೆಗಾರರಾಗಿದ್ದರೆ ಶೇ. 80 ರಷ್ಟು ಮಾಲಿನ್ಯಕ್ಕೆ ದೆಹಲಿಯೇ ಕಾರಣ ಎಂದು ಹೇಳಿದ್ದಾರೆ.
