ಸಿಡ್ನಿ, ಬ್ರಿಸ್ಬೇನ್, ಮೆಲ್ಬೊರ್ನ್ ಸೇರಿದಂತೆ ಹಲವು ನಗರಗಳಲ್ಲಿ ಯೋಜನೆ ವಿರುದ್ಧ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.
ಕ್ಯಾನ್'ಬೆರಾ(ಅ.08): ಭಾರತೀಯ ಉದ್ಯಮಿ ಗೌತಮ್ ಅದಾನಿಗೆ ಸೇರಿದ ಕಂಪನಿಯ ಪ್ರಸ್ತಾಪಿತ ಕಾರ್ಮೈಕಲ್ ಕಲ್ಲಿದ್ದಲು ಗಣಿಗಾರಿಕೆ ವಿರೋಧಿಸಿ ಆಸ್ಟ್ರೇಲಿಯಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ.
ಸಿಡ್ನಿ, ಬ್ರಿಸ್ಬೇನ್, ಮೆಲ್ಬೊರ್ನ್ ಸೇರಿದಂತೆ ಹಲವು ನಗರಗಳಲ್ಲಿ ಯೋಜನೆ ವಿರುದ್ಧ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.
ಸ್ಥಳೀಯರಿಗೆ ಸಾಕಷ್ಟು ಉದ್ಯೋಗ ನೀಡುವ ಭರವಸೆ ಅದಾನಿ ನೀಡಿದ್ದಾರಾದರೂ, ಯೋಜನೆಯಿಂದ ಜಾಗತಿಕ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ ಮತ್ತು ಆಸ್ಟ್ರೇಲಿಯಾದ ಕರಾವಳಿ ತೀರಕ್ಕೆ ಹಾನಿಯಾಗುತ್ತದೆ ಎಂದು ಪ್ರತಿಭಟನಕಾರರು ಆಪಾದಿಸಿದ್ದಾರೆ.