ರಾಜಧಾನಿಗರ ಹಸಿವು ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಇಂದಿರಾ ಕ್ಯಾಂಟೀನ್'ಗೆ ಊಟ, ತಿಂಡಿ ಸರಬರಾಜು ಮಾಡುವಲ್ಲಿ ಪಾಲಿಕೆ ವಿಫಲವಾಗ್ತಿದೇಯಾ ಎಂಬ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಕ್ಯಾಂಟೀನ್ ಆರಂಭವಾಗಿ ವಾರಗಳು ಕಳೆದರೂ ಕಿಚನ್ ಸೆಂಟರ್'ಗಳಿಂದ ಆಹಾರ ಸರಬರಾಜು ಆಗುತ್ತಿಲ್ಲ.ಆ ಕುರಿತಾದ ವಿಶೇಷ ವರದಿ ಇಲ್ಲಿದೆ.

ಬೆಂಗಳೂರು(ಆ.21): ಕಳೆದ ಬುಧವಾರ ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಉದ್ದೇಶದಿಂದ ರಾಜಧಾನಿಯಲ್ಲಿ ಇಂದಿರಾ ಕ್ಯಾಂಟೀನ್’ ಯೋಜನೆಗೆ ಸರ್ಕಾರ ಚಾಲನೆ ನೀಡಿತ್ತು. ಬಡವರಿಗಾಗಿ, ಹಸಿದು ಬಂದವರಿಗೆ ಅಂತಾಲ್ಲೇ ಬಿಂಬಿಸಿ ಕೊಂಡಿರುವ ಸರ್ಕಾರ ಸಾಕಷ್ಟು ಪ್ರಚಾರವನ್ನು ಗಿಟ್ಟಿಸಿಕೊಂಡಿತು. ಆದರೆ ಜನರಿಗೆ ಪದಾರ್ಥಗಳ ನೀಡುವ ಮುನ್ನ ವಹಿಸಬೇಕಾದ ಜಾಗರೂಕತೆ, ಎಚ್ಚರಿಕೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಇನ್ನೂ ತಡವರಿಸುತ್ತಿದೆ.

ಇಂದಿರಾ ಕ್ಯಾಂಟೀನ್'ನಲ್ಲಿ ಜನ ತಿನ್ನುವ ಅನ್ನ, ಸಾಂಬಾರು, ಬೆಳಗ್ಗಿನ ಪಲಾವ್, ಖಾರಬಾತ್ ಇವೆಲ್ಲವು ಇತ್ತೀಚೆಗಷ್ಟೇ ಕಾರ್ಯಾರಂಭವಾದ ಕಿಚನ್ ಸೆಂಟರ್ ಗಳಿಂದ ಸರಬರಾಜು ಆಗ್ತಿಲ್ಲ. ಬದಲಾಗಿ ಅರಮನೆ ಮೈದಾನದಲ್ಲಿ ಅಡುಗೆ ತಯಾರಿ ಆಗ್ತಿದೆ.ಇಂದೂ ಕೂಡಾ ಮುಂದುವರಿದಿದ್ದು, ನಿತ್ಯ 8-10 ಸಾವಿರ ಮಂದಿಗೆ ರಾತ್ರೋ ರಾತ್ರಿ ಊಟ, ತಿಂಡಿ ತಯಾರಿ ಆಗುತ್ತಿದೆ. ಈ ಬಗ್ಗೆ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದಾಗ ಸರ್ಕಾರದ ಎಡುವುತ್ತಿರೋದು ಬೆಳಕಿಗೆ ಬಂದಿದೆ.

ಇನ್ನು ಕ್ಯಾಟರಿಂಗ್ ಸರ್ವೀಸ್ ಗಳ ಗುತ್ತಿಗೆ ಪಡೆದ ರೆವಾರ್ಡ್ ಸಂಸ್ಥೆಯ ನೇತೃತ್ವದಲ್ಲಿ ಅರಮನೆ ಮೈದಾನದ ವೈಟ್ ಪೆಟೆಲ್ ಅಡುಗೆ ಮನೆಯಲ್ಲಿ ಊಟ ತಯಾರಿ ಆಗ್ತಿದೆ.ಇದನ್ನು ಸೆರೆ ಹಿಡಿಯಲು ಹೋದಾಗ ಸಿಬ್ಬಂದಿಗಳಿಂದ ಪ್ರತಿರೋಧ ವ್ಯಕ್ತವಾಯಿತು.ಕಿಚನ್ ಸೆಂಟರ್ ಗಳಲ್ಲಿ ತಾಂತ್ರಿಕ ದೋಷಗಳಿಂದಾಗಿ ಇಲ್ಲಿ ಆಹಾರ ತಯಾರಿ ಮಾಡ್ತಿದ್ದೇವೆ.ಹೆಚ್ಚಿನ ಮಾಹಿತಿಗಾಗಿ ಗುತ್ತಿಗೆ ಪಡೆದ ಸಂಸ್ಥೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ್ಲೆ ಪಡೆದುಕೊಳ್ಳಿ ಎಂಬ ಉತ್ತರ ಬಂತು.

ಇಂದಿರಾ ಕ್ಯಾಂಟೀನ್ ಗೆ ಅರಮನೆ ಮೈದಾನದಲ್ಲಿ ಊಟ, ತಿಂಡಿ ತಯಾರಿ ಆಗ್ತಿರೋದ್ರ ಬಗ್ಗೆ ಕೆಲ ದಿನಗಳ ಹಿಂದೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಮೇಯರ್ ಪದ್ಮಾವತಿ ಸೋಮವಾರದ ಒಳಗೆ ಎಲ್ಲಾ ಸಮಸ್ಯೆ ಪರಿಹರಿಸುತ್ತೇವೆ. ಉದ್ಘಾಟನೆಗೊಂಡ ಆರು ಕಿಚನ್ ಸೆಂಟರ್ ಗಳಿಂದ್ಲೇ ಕ್ಯಾಂಟೀನ್ ಗೆ ಅಡುಗೆ ಸರಬರಾಜು ಆಗುತ್ತೆ ಅಂತಾ ಭರವಸೆ ನೀಡಿದ್ರೂ. ಆದರೆ ಇವತ್ತಿನವರೆಗೂ ಸಮಸ್ಯೆ ಪರಿಹರಿಸಲು ಪಾಲಿಕೆಯಿಂದ ಸಾಧ್ಯವಾಗಿಲ್ಲ. ಇನ್ನೂ ಕೆಲದಿನಗಳ ಕಾಲ ಈ ರೀತಿಯಲ್ಲೇ ಕ್ಯಾಂಟೀನ್ ಗೆ ಊಟ ಸರಬರಾಜು ಆಗಲಿದೆ.