ಅದರ ಭಾಗವಾಗಿ ಮಾತನಾಡಿರುವ ಸ್ಟೀನ್ ಹಾಕಿಂಗ್, ಹವಾಮಾನ ಬದಲಾವಣೆ, ಕ್ಷುದ್ರಗ್ರಹಗಳ ದಾಳಿ, ಸಾಂಕ್ರಾಮಿಕ ರೋಗಗಳು ಹಾಗೂ ಜನಸಂಖ್ಯಾ ಸ್ಫೋಟದಿಂದಾಗಿ ಈ ಭೂಮಿ ಅಸ್ಥಿರ ಸ್ಥಾನದಲ್ಲಿದೆ.
ಲಂಡನ್(ಮೇ.05): ಮಾನವರು ಬದುಕಬೇಕು ಎಂದರೆ ಒಂದು ಶತಮಾನದಲ್ಲಿ ಭೂಮಿಯನ್ನು ತೊರೆದು, ಬೇರೊಂದು ಗ್ರಹ ನೋಡಿಕೊಳ್ಳಬೇಕು ಎಂದು ಪ್ರಸಿದ್ಧ ವಿಜ್ಞಾನಿ ಸ್ಟೀನ್ ಹಾಕಿಂಗ್ ತಿಳಿಸಿದ್ದಾರೆ.
ಬಿಬಿಸಿ ವಾಹಿನಿ ‘ಎಕ್ಸ್‌ಪಡಿಷನ್ ನ್ಯೂ ಅರ್ತ್’ (ಹೊಸ ಭೂಮಿಯ ಶೋಧ) ಎಂಬ ಸಾಕ್ಷ್ಯಚಿತ್ರವೊಂದನ್ನು ಶೀಘ್ರದಲ್ಲೇ ಪ್ರಸಾರ ಮಾಡಲು ಉದ್ದೇಶಿಸಿದೆ. ಅದರ ಭಾಗವಾಗಿ ಮಾತನಾಡಿರುವ ಸ್ಟೀನ್ ಹಾಕಿಂಗ್, ಹವಾಮಾನ ಬದಲಾವಣೆ, ಕ್ಷುದ್ರಗ್ರಹಗಳ ದಾಳಿ, ಸಾಂಕ್ರಾಮಿಕ ರೋಗಗಳು ಹಾಗೂ ಜನಸಂಖ್ಯಾ ಸ್ಫೋಟದಿಂದಾಗಿ ಈ ಭೂಮಿ ಅಸ್ಥಿರ ಸ್ಥಾನದಲ್ಲಿದೆ. ಮುಂದಿನ 100 ವರ್ಷಗಳಲ್ಲಿ ನಾವೇನಾದರೂ ಹೊಸ ಭೂಮಿ ಶೋಸದೇ ಹೋದಲ್ಲಿ ನಮ್ಮ ಪ್ರಭೇದ ಅವಸಾನಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
