ಜುಲೈ 1 ರಿಂದ ರಾಜ್ಯದಲ್ಲಿ ಜಿಎಸ್’ಟಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಹೇಳಿದ್ದಾರೆ

ಬೆಂಗಳೂರು: ಜುಲೈ 1 ರಿಂದ ರಾಜ್ಯದಲ್ಲಿ ಜಿಎಸ್’ಟಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಎಲ್ಲಾ 20 ಚೆಕ್ ಪೋಸ್ಟ್’ಗಳು ರದ್ದಾಗುತ್ತವೆ ಎಂದು ಮುಖ್ಯಮಂತ್ರಿಗಳು ಸದನಕ್ಕೆ ತಿಳಿಸಿದ್ದಾರೆ.

ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜುಲೈ 1ರಿಂದ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ರಾಜ್ಯದಲ್ಲೂ ‘ಕರ್ನಾಟಕ ಜಿಎಸ್‌ಟಿ ವಿಧೇಯಕ'ವನ್ನು ಮಂಡಿಸಲಾಗಿದೆ.