ಚುನಾವಣಾ ಹೊಸ್ತಿಲಲ್ಲಿ ರಾಜ್ಯ ಸರ್ಕಾರದಿಂದ ವೋಟ್ ಬ್ಯಾಂಕ್ ತಂತ್ರದ ಮೊರೆ ಹೋಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಲ್ಲಿ ಪೀಠ ಸ್ಥಾಪನೆಗೆ ಮುಂದಾಗಿದೆ ಸರ್ಕಾರ. ಹೈಕಮಾಂಡ್ ಮನಗೆಲ್ಲಲು ಸಿಎಂ ಸಿದ್ದರಾಮಯ್ಯ ಹೊಸ ತಂತ್ರ ಹೆಣೆಯುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಆದರೆ ಪೀಠ ಸ್ಥಾಪನೆಗೆ ಹಣ ಕೊಡಲು ಗ್ರಾಮಿಣಾಭಿವೃದ್ಧಿ ಇಲಾಖೆ ಹಿಂದೇಟು ಹಾಕಿದೆ.

ಬೆಂಗಳೂರು(ಅ.23): ಚುನಾವಣಾ ಹೊಸ್ತಿಲಲ್ಲಿ ರಾಜ್ಯ ಸರ್ಕಾರದಿಂದ ವೋಟ್ ಬ್ಯಾಂಕ್ ತಂತ್ರದ ಮೊರೆ ಹೋಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಲ್ಲಿ ಪೀಠ ಸ್ಥಾಪನೆಗೆ ಮುಂದಾಗಿದೆ ಸರ್ಕಾರ. ಹೈಕಮಾಂಡ್ ಮನಗೆಲ್ಲಲು ಸಿಎಂ ಸಿದ್ದರಾಮಯ್ಯ ಹೊಸ ತಂತ್ರ ಹೆಣೆಯುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಆದರೆ ಪೀಠ ಸ್ಥಾಪನೆಗೆ ಹಣ ಕೊಡಲು ಗ್ರಾಮಿಣಾಭಿವೃದ್ಧಿ ಇಲಾಖೆ ಹಿಂದೇಟು ಹಾಕಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದಿರುವ ಸಿಎಂ ಸಚಿವಾಲಯ, ಪೀಠ ಸ್ಥಾಪನೆಗೆ 10 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸಿಎಂ ಕಚೇರಿಯಿಂದ ಮನವಿ ಸಲ್ಲಿಸಲಾಗಿದೆ. ರಾಜೀವ್ ಗಾಂಧಿ ಯೋಜನೆಗಳನ್ನು, ಯೋಚನೆಗಳನ್ನು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಶಾಶ್ವತವಾಗಿ ಜಾರಿಗೊಳಿಸುವುದು ಪೀಠ ಸ್ಥಾಪನೆಯ ಉದ್ದೇಶ. ಆರಂಭದಲ್ಲಿ ತನ್ನಲ್ಲಿ ಈ ರೀತಿ ಅನುದಾನ ನೀಡಲು ಅವಕಾಶವಿಲ್ಲ, ಗ್ರಾ.ಪಂ., ತಾ. ಪಂ., ಮತ್ತು ಜಿ. ಪಂ. ಕಟ್ಟಡ ನಿರ್ಮಾಣ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮ ಇಲಾಖೆಯಲ್ಲಿ ಕೋರಿರುವ ವಿಚಾರಕ್ಕೆ ಅನುದಾನ ಅಲಭ್ಯವಿದೆ ಎಂದು ಪ್ರತಿಕ್ರಿಯಿಸಿತ್ತು ಗ್ರಾಮೀಣಾಭಿವೃದ್ಧಿ ಇಲಾಖೆ.

ಅಂತಿಮವಾಗಿ ಹಣಕಾಸು ಇಲಾಖೆ ಪ್ರಸ್ತಾವನೆ ಪರಿಶೀಲಿಸಿ, ವ್ಯಕ್ತಿಗಳ ಹೆಸರಿನಲ್ಲಿ ಪೀಠ ಸ್ಥಾಪನೆ ಹಾಗೂ ಸ್ಮಾರಕ ರಚನೆ ಮಾಡುವ ಪ್ರಸ್ತಾವನೆ ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುತ್ತೆ. ಪರಿಣಾಮ ಈಗ 10 ಕೋಟಿ ಬಿಡುಗಡೆ ಮಾಡಬೇಕಾದ ಜವಾಬ್ದಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಗಲೇರಿದೆ..