ಈ ಹಿಂದೆ 8 ಗಂಟೆಗೆ ತರಗತಿ ಆರಂಭಿಸಲು ಆದೇಶ ಹೊರಡಿಸಲಾಗಿತ್ತು.

ಬೆಂಗಳೂರು(ಜು.28): ರಾಜ್ಯದ ಸರ್ಕಾರಿ‌ ಪದವಿ‌ ಕಾಲೇಜುಗಳ ತರಗತಿ ಆರಂಭದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಆಗಸ್ಟ್ 1 ರಿಂದ ಅನ್ವಯವಾಗುವಂತೆ ಬೆಳಗ್ಗೆ 9 ಗಂಟೆಗೆ ತರಗತಿ ಆರಂಭಿಸಲು ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.

ಈ ಹಿಂದೆ 8 ಗಂಟೆಗೆ ತರಗತಿ ಆರಂಭಿಸಲು ಆದೇಶ ಹೊರಡಿಸಲಾಗಿತ್ತು. ಕಾಲೇಜು ಶಿಕ್ಷಣ ಇಲಾಖೆ ಇಂದು ಮತ್ತೆ ಆದೇಶವನ್ನು ಪರಿಷ್ಕರಿಸಿದೆ.