ಮೌಢ್ಯ ನಿಷೇಧ ಕಾಯ್ದೆಗೆ ರಾಜ್ಯ ಸಂಪುಟ ಸಭೆ ಅನುಮೋದನೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೌಢ್ಯ ನಿಷೇಧ ಕಾಯ್ದೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಭಾರೀ ಚರ್ಚೆ, ವಿವಾದಕ್ಕೂ ಎಡೆಮಾಡಿದ್ದ ಕಾಯ್ದೆಯನ್ನ ರಾಜ್ಯ ಸರ್ಕಾರ ಅಂತಿಮ ಹಂತದಲ್ಲಿ ಭಾರೀ ಎಚ್ಚರಿಕೆಯಿಂದ ಅಳೆದು ತೂಗಿ ಅಂತಿಮಗೊಳಿಸಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕಾಯ್ದೆಯ ಪ್ರಕಾರ ಯಾವುದು ನಿಷೇಧಿತ ಯಾವುದಕ್ಕೆ ನಿರ್ಬಂಧ ಇಲ್ಲ ಅನ್ನೋ ವಿವರ ಇಲ್ಲಿದೆ.

State Cabinet Approves Anti Superstition Act

ಬೆಂಗಳೂರು (ಸೆ.27): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೌಢ್ಯ ನಿಷೇಧ ಕಾಯ್ದೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಭಾರೀ ಚರ್ಚೆ, ವಿವಾದಕ್ಕೂ ಎಡೆಮಾಡಿದ್ದ ಕಾಯ್ದೆಯನ್ನ ರಾಜ್ಯ ಸರ್ಕಾರ ಅಂತಿಮ ಹಂತದಲ್ಲಿ ಭಾರೀ ಎಚ್ಚರಿಕೆಯಿಂದ ಅಳೆದು ತೂಗಿ ಅಂತಿಮಗೊಳಿಸಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕಾಯ್ದೆಯ ಪ್ರಕಾರ ಯಾವುದು ನಿಷೇಧಿತ ಯಾವುದಕ್ಕೆ ನಿರ್ಬಂಧ ಇಲ್ಲ ಅನ್ನೋ ವಿವರ ಇಲ್ಲಿದೆ.

ಯಾವುದಕ್ಕೆ ನಿಷೇಧ?

ಬದುಕಿರುವ ಮನುಷ್ಯನನ್ನು ದೈವದ ನೆಪಹೊಡ್ಡಿ ನರಬಲಿ ಕೊಡುವುದು

ಭೂತ ಬಿಡಿಸುವ ಭೂತೋಚ್ಛಾಟನೆ

ವಾಮಾಚಾರ, ಭಾನಾಮತಿ,ಮಾಟ,ಕರ್ಣಿ,ತಂತ್ರ

ಎಂಜಲೆಲೆ ಮೇಲೆ ಉರುಳಾಡುವ ಮಡೆಸ್ನಾನ

ಅಘೋರಿ, ಸಿದ್ದಭಕ್ತಿಗಳ  ನಿಷೇಧ

ಕರಾವಳಿಯ ಅಜಲು ಸಂಪ್ರದಾಯ

ಶಿಶುವಿನ ಎತ್ತರವನ್ನು ಎಸೆಯುವುದು

ಮಹಿಳೆಯರನ್ನು ಬೆತ್ತಲೆಗೊಳಿಸಿ ಸೇವೆ ಮಾಡೋ ಬೆತ್ತಲ ಸೇವೆ

ಅಲೌಕಿಕ ಶಕ್ತಿಯನ್ನು ಆಹ್ವಾನಿಸುವ ನೆಪದಲ್ಲಿ ಮಹಿಳೆಯರ ಲೈಂಗಿಕ ಶೋಷಣೆ  (ಗ್ರಾಫಿಕ್ಸ್ ಔಟ್​)

ಯಾವುದು ನಿಷೇಧವಲ್ಲ?

ಜ್ಯೋತಿಷ್ಯ - ಭವಿಷ್ಯ

ಸಂಖ್ಯಾಶಾಸ್ತ್ರ

ವಾಸ್ತುವಿನ ಆಧಾರದ ಮೇಲೆ ಭವಿಷ್ಯ ಹೇಳಬಹುದು

ಕುಂಡಲಿ ಶಾಸ್ತ್ರ ಅಭ್ಯಾಸ

ಹಸ್ತಸಾಮುದ್ರಿಕ ಶಾಸ್ತ್ರ

ಮೌಢ್ಯ ನಿಷೇಧ ಕಾಯ್ದೆ ಪ್ರಕಾರ ನಿರ್ಬಂಧಿಸಲು ನಿರ್ಧರಿಸುವ ಮೌಢ್ಯಾಚಾರಣೆಗಳ ಮಾಡಿದರೆ 2 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಜುಲ್ಮಾನೆಯನ್ನೂ ಹಾಕಲು ತೀರ್ಮಾನಿಸಲಾಗಿದೆ. ಇನ್ನು ಯಾವುದೇ ವಿವಾದಕ್ಕೆ ಕಾರಣವಾದರೂ ಕೂಡಲೇ ಅದರಿಂದ ಹೊರಬರಲೆಂದೇ ಈ ಕಾಯ್ದೆಯಿಂದ ಯಾವುದೇ ವಿಚಾರವನ್ನೂ ತೆಗೆಯುವ ಹಾಗೂ ಯಾವುದೇ ಹೊಸ ವಿಚಾರ ಸೇರಿಸುವ ಅವಕಾಶವನ್ನು ಮುಕ್ತವಾಗಿಟ್ಟುಕೊಳ್ಳಲಾಗಿದೆ ಅಂತ ಸಚಿವ ಜಯಚಂದ್ರ ಸಚಿವ ಸಂಪುಟ ಸಭೆಯ ನಂತರ ಹೇಳಿದರು.  ಒಟ್ಟಾರೆ, ಭಾರೀ ಚರ್ಚೆಗೆ, ಹೋರಾಟಗಳಿಗೆ ಆಸ್ಪದ ನೀಡಿದ್ದ ಮೌಢ್ಯ ನಿಷೇಧ ಕಾಯ್ದೆಗೆ ಕಡೆಗೂ ಮುಕ್ತಿ ಸಿಗುವ ಕಾಲ ಬಂದಿದ್ದು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಅಗತ್ಯ ಬದಲಾವಣೆಗಳೊಂದಿಗೆ ಮಸೂದೆಗೆ ಅಂಗೀಕಾರ ಪಡೆಯಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ.

 

 

 

 

Latest Videos
Follow Us:
Download App:
  • android
  • ios