ಕಾರ್ಯಕ್ರಮದಲ್ಲಿ  50 ಸಾವಿರಕ್ಕೂ ಹೆಚ್ಚು ಭಕ್ತರು ಏಕಾಏಕಿ ಭೇಟಿ ಕೊಟ್ಟಿದ್ದು  ನೂಕುನುಗ್ಗಲಿಗೆ ಕಾರಣವಾಗಿದೆ.

ವಾರಾಣಸಿ(ಅ. 15): ಧಾರ್ಮಿಕ ಯಾತ್ರೆಯೊಂದರ ವೇಳೆ ನೂಕುನುಗ್ಗಲಾಗಿ ಕಾಲ್ತುಳಿತದಿಂದ ಹಲವು ಮಂದಿ ಸಾವನ್ನಪ್ಪಿರುವ ದುರಂತದ ಘಟನೆ ಶನಿವಾರ ನಡೆದಿದೆ. ಗಂಗಾ ನದಿ ತಟದ ರಾಮನಗರದ ಬಳಿ ಬಾಬಾ ಜೈಗುರುದೇವ್ ಅವರ ಭಕ್ತರು ನಡೆಸುತ್ತಿದ್ದ ಮೆರವಣಿಗೆಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ 24ಕ್ಕೂ ಹೆಚ್ಚು ಮಂದಿ ಸತ್ತಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ.

ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಭಕ್ತರು ಏಕಾಏಕಿ ಭೇಟಿ ಕೊಟ್ಟಿದ್ದು ನೂಕುನುಗ್ಗಲಿಗೆ ಕಾರಣವಾಗಿದೆ. ರಾಜಘಾಟ್ ಸೇತುವೆ ಬಳಿ ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲದ್ದರಿಂದ ನೂಕುನುಗ್ಗಲನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಸಾವು ನೋವು ಹೆಚ್ಚಿನ ಪ್ರಮಾಣದಲ್ಲುಂಟಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ನೊಂದ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದು, 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.