ಹೌದು, ಹಸಿವಿನಿಂದ ಬಳಲುತ್ತಿದ್ದ ಭಿಕ್ಷುಕನೋರ್ವನಿಗೆ ಖಾನ್‌ ಊಟದ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಖಾನ್‌ ಬರುವಿಕೆಗಾಗಿ ಕಾಯುತ್ತಿದ್ದ ಭಿಕ್ಷುಕ, ಖಾನ್‌‌ ಕಾರು ಏರುವುದಕ್ಕೆ ಬರುತ್ತಿದ್ದಂತೆ ಅವರ ಕಾಲು ಹಿಡಿದು ಊಟ ನೀಡುವಂತೆ ಕೇಳಿದ್ದಾರೆ.

ಮುಂಬೈ (ಫೆ.21): ಬಾಲಿವುಡ್‌ನ ಕಿಂಗ್ ಖಾನ್‌ ಎಂದು ಕರೆಯಲ್ಪಡುವ ಶಾರುಖ್ ಖಾನ್ ಸದಾ ಸಿನಿಮಾಗಳ ಆ್ಯಕ್ಟಿಂಗ್‌ನಲ್ಲಿ ಬ್ಯೂಸಿ ಆಗಿರುತ್ತಾರೆ.

ತೆರೆಯ ಮೇಲೆ ಅನೇಕ ಉತ್ತಮ ಚಿತ್ರ ನೀಡಿರುವ ಖಾನ್, ನಿಜ ಜೀವನದಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬ ಅನುಮಾನ ಎಲ್ಲರಲ್ಲೂ ಇರುತ್ತದೆ. ಆದರೆ ನಿಜ ಜೀವನದಲ್ಲೂ ಖಾನ್‌ ನಿಜವಾದ ಹೀರೋ ಎಂದು ರೂಪಿಸಿದ್ದಾರೆ.

ಹೌದು, ಹಸಿವಿನಿಂದ ಬಳಲುತ್ತಿದ್ದ ಭಿಕ್ಷುಕನೋರ್ವನಿಗೆ ಖಾನ್‌ ಊಟದ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಖಾನ್‌ ಬರುವಿಕೆಗಾಗಿ ಕಾಯುತ್ತಿದ್ದ ಭಿಕ್ಷುಕ, ಖಾನ್‌‌ ಕಾರು ಏರುವುದಕ್ಕೆ ಬರುತ್ತಿದ್ದಂತೆ ಅವರ ಕಾಲು ಹಿಡಿದು ಊಟ ನೀಡುವಂತೆ ಕೇಳಿದ್ದಾರೆ.

ತಕ್ಷಣ ಅವರಿಗೆ ಊಟದ ವ್ಯವಸ್ಥೆ ಮಾಡಲು ಹೇಳಿರುವ ಶಾರುಖ್‌ ಖಾನ್, ಭಿಕ್ಷುಕನನ್ನು ಅಪ್ಪಿಕೊಂಡು ತಮ್ಮ ಪ್ರೀತಿ ತೋರಿಸಿದ್ದಾರೆ.