ಇಂದು ಮತ್ತೊಮ್ಮೆ ಶ್ರೀನಿವಾಸ್ ಪ್ರಸಾದರನ್ನು ಪೋನ್ ಮೂಲಕ ಸಂಪರ್ಕಿಸಲಾಯಿತು. ರಾಜೀನಾಮೆಗೆ ನೀಡಿರುವ ಕಾರಣಗಳ ಬಗ್ಗೆ ಅವರಿಂದ ದೃಡಿಕರಿಸಿಕೊಳ್ಳಲಾಯಿತು
ಬೆಂಗಳೂರು(ಅ.21): ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ಸ್ಪೀಕರ್ ಕೆ ಬಿ ಕೋಳಿವಾಡ್ ಅಂಗೀಕರಿಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ಕೊಟ್ಟಿರೋ ಕಾರಣಗಳನ್ನು ಕ್ರಾಸ್ ಚಕ್ ಮಾಡುವ ಅಧಿಕಾರ ಸಂವಿಧಾನದಲ್ಲಿದೆ. ಹಾಗಾಗಿ ಮೂರು ದಿನಗಳಿಂದ ರಾಜೀನಾಮೆ ಅಂಗೀಕರಿಸಿರಲಿಲ್ಲ. ಇಂದು ಮತ್ತೊಮ್ಮೆ ಶ್ರೀನಿವಾಸ್ ಪ್ರಸಾದರನ್ನು ಪೋನ್ ಮೂಲಕ ಸಂಪರ್ಕಿಸಲಾಯಿತು. ರಾಜೀನಾಮೆಗೆ ನೀಡಿರುವ ಕಾರಣಗಳ ಬಗ್ಗೆ ಅವರಿಂದ ದೃಡಿಕರಿಸಿಕೊಂಡ ಬಳಿಕ, ಸ್ಪಚ್ಛೆಯಿಂದ ಮತ್ತು ಯಾರ ಒತ್ತಡಕ್ಕೂ ರಾಜೀನಾಮೆ ನೀಡಿಲ್ಲ ಎನ್ನುವುದು ಖಚಿತವಾಗಿದೆ. ಹೀಗಾಗಿ ರಾಜೀನಾಮೆ ಅಂಗೀಕರಿಸುತ್ತಿರುವುದಾಗಿ ಸ್ಪೀಕರ್ ಕೋಳಿವಾಡ್ ತಿಳಿಸಿದ್ರು.
