ಮುಂಬೈ ತಲುಪಿದ ಶ್ರೀದೇವಿ ಪಾರ್ಥಿವ ಶರೀರ : ನಾಳೆ ಮಧ್ಯಾಹ್ನ ಅಂತಿಮ ಸಂಸ್ಕಾರ

First Published 27, Feb 2018, 10:28 PM IST
Sridevis funeral tomorrow actor died due to accidental drowning
Highlights

ನಾಳೆ ಬೆಳಿಗ್ಗೆ ಸಾರ್ವಜನಿಕರ ಅಂತಿಮ ದರ್ಶನದ ನಂತರ ವಿಲೆ ಪಾರ್ಲೆಯ ಚಿತಾಗಾರದಲ್ಲಿ ಮಧ್ಯಾಹ್ನ 3.30ರ ಆಸುಪಾಸಿನಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ಮುಂಬೈ(ಫೆ.27): ದುಬೈ'ನ ಹೋಟಲ್'ನಲ್ಲಿ ಬಾತ್ ಟಬ್'ಗೆ ಬಿದ್ದು ಆಕಸ್ಮಿಕವಾಗಿ ಮೃತಪಟ್ಟ ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರ ವಿಶೇಷ ವಿಮಾನದಲ್ಲಿ ಮುಂಬೈಗೆ ತಲುಪಿದೆ.

ಅಸಹಜ ಸಾವಲ್ಲ ಎಂದು ದುಬೈ ಪೊಲೀಸರು ಶ್ರೀದೇವಿ ಕುಟುಂಬದವರಿಗೆ ಪತ್ರವನ್ನು ರವಾನಿಸಿದ ನಂತರ ಮೃತದೇಹವನ್ನು ಹಸ್ತಾಂತರಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ನಟ ಅನಿಲ್ ಕಪೂರ್, ಸೋನಂ ಕಪೂರ್, ಶ್ರೀದೇವಿ ಮಕ್ಕಳು ಹಾಗೂ ಉದ್ಯಮಿ ಅನಿಲ್ ಅಂಬಾನಿ ಉಪಸ್ಥಿತರಿದ್ದರು.

ಶ್ರೀದೇವಿ ನಿವಾಸಕ್ಕೆ ಪಾರ್ಥೀವ ಶರೀರ ರವಾನೆಯಾಗಿದ್ದು ನಾಳೆ ಬೆಳಿಗ್ಗೆ ಸಾರ್ವಜನಿಕರ ಅಂತಿಮ ದರ್ಶನದ ನಂತರ ವಿಲೆ ಪಾರ್ಲೆಯ ಚಿತಾಗಾರದಲ್ಲಿ ಮಧ್ಯಾಹ್ನ 3.30ರ ಆಸುಪಾಸಿನಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

54 ವರ್ಷದ ಖ್ಯಾತ ನಟಿ 2 ದಿನಗಳ ಹಿಂದೆ ಸಂಬಂಧಿಕರ ಮದುವೆಯ ಪ್ರಯುಕ್ತ ದುಬೈಗೆ ತೆರಳಿದ್ದ ಸಂದರ್ಭದಲ್ಲಿ ಜುಮಿರಾ ಎಮಿರೇಟ್ಸ್ ಟವರ್ಸ್'ನ ಹೋಟೆಲ್'ನ 2201 ಕೊಠಡಿಯಲ್ಲಿ  ಸ್ನಾನ ಮಾಡಲು ತೆರಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿದ್ದರು.

loader