ನಟಿ ಶ್ರೀದೇವಿ ಸಾವು ಬೇರೆ ಬೇರೆ ಆಯಾಮವನ್ನು ಪಡೆಯುತ್ತಿದೆ. ಸಾಕಷ್ಟು ಸಾಧ್ಯತೆಗಳು ಇರಬಹುದೆಂಬ ಮಾತುಗಳು ಕೇಳಿ ಬರುತ್ತಿದೆ. ಈಗ ಬಿಜಿಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೊಸ ಬಾಂಬ್ ಸ್ಫೋಟಿಸಿದ್ದಾರೆ. ಶ್ರೀದೇವಿ ಮದ್ಯ ಸೇವಿಸುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ಬಿಯರ್ ತೆಗೆದುಕೊಳ್ಳುತ್ತಿದ್ದರು. ಇದುವರೆಗೂ ಅಧಿಕಾರಿಗಳು ಯಾಕೆ ಸಿಸಿಟಿವಿ ಫೂಟೇಜ್ ತೆಗೆದುಕೊಂಡಿಲ್ಲ? ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರು (ಫೆ.27): ನಟಿ ಶ್ರೀದೇವಿ ಸಾವು ಬೇರೆ ಬೇರೆ ಆಯಾಮವನ್ನು ಪಡೆಯುತ್ತಿದೆ. ಸಾಕಷ್ಟು ಸಾಧ್ಯತೆಗಳು ಇರಬಹುದೆಂಬ ಮಾತುಗಳು ಕೇಳಿ ಬರುತ್ತಿದೆ. ಈಗ ಬಿಜಿಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೊಸ ಬಾಂಬ್ ಸ್ಫೋಟಿಸಿದ್ದಾರೆ.
ಶ್ರೀದೇವಿ ಮದ್ಯ ಸೇವಿಸುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ಬಿಯರ್ ತೆಗೆದುಕೊಳ್ಳುತ್ತಿದ್ದರು. ಇದುವರೆಗೂ ಅಧಿಕಾರಿಗಳು ಯಾಕೆ ಸಿಸಿಟಿವಿ ಫೂಟೇಜ್ ತೆಗೆದುಕೊಂಡಿಲ್ಲ? ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಬಾಲಿವುಡ್’ಗೆ ಸಂಪರ್ಕವಿದ್ದು, ಇದು ಶ್ರೀದೇವಿ ಸಾವಿಗೂ ಕಾರಣವಾಗಿರಬಹುದು ಎಂದು ಸ್ವಾಮಿ ಆರೋಪಿಸಿದ್ದಾರೆ.
ಅತ್ತ ದುಬೈನ ಪಬ್ಲಿಕ್ ಪ್ರಾಸಿಕ್ಯೂಷನ್ ವಿಚಾರಣೆ ತೀವ್ರಗೊಂಡಿದೆ. ದೇಶ ಬಿಟ್ಟು ತೆರಳದಂತೆ ಶ್ರೀದೇವಿ ಪತಿ ಬೋನಿ ಕಪೂರ್’ಗೆ ಸೂಚನೆ ನೀಡಿದೆ. ಬೋನಿ ಕಪೂರ್ ಸೇರಿ ಮೋಹಿತ್ ಮಾರ್ವಾ ಕುಟುಂಬ ಸದಸ್ಯರ ವಿವರ ಸಂಗ್ರಹಿಸಿದ್ದಾರೆ. ಜುಮೈರಾ ಎಮಿರೇಟ್ಸ್ ಟವರ್ ಹೋಟೆಲ್ ಸಿಬ್ಬಂದಿ ವಿಚಾರಣೆ ಮಾಡಲಾಗಿದೆ.
ಶ್ರೀದೇವಿ ಅವರ ಮೊಬೈಲ್ ಕಾಲ್ ಡಾಟಾ ಪರಿಶೀಲನೆ ಮಾಡಲಾಗಿದ್ದು ಶ್ರೀದೇವಿ ವಾಸ್ತವ್ಯ ಹೂಡಿದ್ದ ಹೋಟೆಲ್ ರೂಮ್‌ನಲ್ಲಿ ಸೀನ್ ಮರುಸೃಷ್ಟಿಸುವ ಕೆಲಸ ನಡೆಯುತ್ತಿದೆ. ಶ್ರೀದೇವಿ ವೈದ್ಯಕೀಯ ದಾಖಲೆಗಳು, ಈ ಹಿಂದೆ ಮಾಡಿಸಿಕೊಂಡಿದ್ದ ಸರ್ಜರಿಗಳು, ಬಳಸುತ್ತಿದ್ದ ಔಷಧಿಗಳ ವಿವರಗಳನ್ನು ದುಬೈ ಪೊಲೀಸರು ಕೇಳಿದ್ದಾರೆ.
