ಬಾತ್‌ಟಬ್‌ಗೆ ಬಿದ್ದು, ಅತಿಲೋಕ ಸುಂದರಿ ಸಾವು

news | Monday, February 26th, 2018
Suvarna Web Desk
Highlights

ಭಾರತೀಯ ಚಿತ್ರರಂಗವನ್ನಾಳಿದ ಶ್ರೀದೇವಿ ಸಾವಿನ ರಹಸ್ಯ ಕಡೆಗೂ ಬಹಿರಂಗಗೊಂಡಿದ್ದು, ಇದು ಆಕಸ್ಮಿಕ ಸಾವೆಂದು ಮರಣೋತ್ತರ ಪರೀಕ್ಷಾ ವರದಿ ಸ್ಪಷ್ಟಪಡಿಸಿದೆ.

ದುಬೈ: ಭಾರತೀಯ ಚಿತ್ರರಂಗವನ್ನಾಳಿದ ಶ್ರೀದೇವಿ ಸಾವಿನ ರಹಸ್ಯ ಕಡೆಗೂ ಬಹಿರಂಗಗೊಂಡಿದ್ದು, ನೀರಿಗೆ ಬಿದ್ದು, ಆಕಸ್ಮಿಕವಾಗಿ ಮೃತಪಟ್ಟಿದ್ದಾರೆಂದು ಮರಣೋತ್ತರ ಪರೀಕ್ಷಾ ವರದಿ ಸ್ಪಷ್ಟಪಡಿಸಿದೆ. ರಕ್ತದಲ್ಲಿ ಆಲ್ಕೋಹಾಲ್ ಅಂಶವಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ, ಹೃದಯ ಸ್ತಂಬನಕ್ಕೆ ತನಿಖೆ ಕುರಿತ ತನಿಖೆ ಮುಂದುವರಿದಿದ್ದು, ಇನ್ನೂ ಸ್ಪಷ್ಟ ಚಿತ್ರಣ ಸಿಗಬೇಕಾಗಿದೆ.

ನಟಿ ಬಾತ್‌ರೂಮ್‌ನ ಬಾತ್‌ಟಬ್‌ನಲ್ಲಿ ಬಿದ್ದರು, ಹೇಗೆ ಕೊನೆಯುಸಿರೆಳೆದಿದ್ದಾರೆಂಬುದಿನ್ನು ಖಚಿತಗೊಂಡಿಲ್ಲ. ಇದು ಹೃದಯ ಸ್ತಂಬನವಲ್ಲ, ಆಲ್ಕೋಹಾಲ್ ಪ್ರಭಾವದಿಂದ ಪ್ರಜ್ಞೆ ತಪ್ಪಿ, ಬಾತ್ ಟಬ್‌ಗೆ ಬಿದ್ದು ಮೃತ್ತಪಟ್ಟಿದ್ದಾರೆಂದು ಗಲ್ಫ್ ನ್ಯೂಸ್ ಮತ್ತು ಖಲೀಜಾ ಟೈಮ್ಸ್ ವರದಿ ಮಾಡಿವೆ. ಆ ಮೂಲಕ ಸಾವಿನ ಕುರಿತಾದ ಊಹಾಪೋಹಗಳಿಗೆ ಸ್ಪಷ್ಟ ಚಿತ್ರಣ ಸಿಗದಂತಾಗಿದೆ.

ಇನ್ನೊಂದೆಡೆ ಸಮಾಜ ಕಾರ್ಯಕರ್ತರು ಶ್ರೀದೇವಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಸಂಬಂಧ ಪೂರೈಸಬೇಕಾದ ಪ್ರಕ್ರಿಯೆಗಳೆಡೆಗೆ ಸಹಕರಿಸುತ್ತಿದ್ದು, ಪಾಸ್‌ಪೋರ್ಟ್ ರದ್ದು ಹಾಗೂ ಇನ್ನಿತರೆ ಪ್ರಕ್ರಿಯೆಗಳು ಶೀಘ್ರವೇ ಮುಗಿಯಲಿದೆ.
 

Comments 0
Add Comment

    ಹೆಚ್ಡಿಕೆಗೆ ಮಲೇಷಿಯಾದಲ್ಲಿ ಆಸ್ತಿ ಇದೆಯೆ? ಇಡಿ, ತೆರಿಗೆ ಅಧಿಕಾರಿಗಳಿಂದ ಬೆದರಿಕೆ

    karnataka-assembly-election-2018 | Friday, May 25th, 2018