ಕೊಲಂಬೋ[ಏ.25]: ಶ್ರೀಲಂಕಾದಲ್ಲಿ ಮತ್ತೆ ಬಾಂಬ್ ದಾಳಿ ನಡೆದಿದೆ. ರಾಜಧಾನಿ ಕೊಲಂಬೋದಿಂದ 40 ಕಿ. ಮೀಟರ್ ದೂರದಲ್ಲಿರುವ ಪುಗೋಡಾ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ  ಇಂದು ಗುರುವಾರ ಬಾಂಬ್ ಸ್ಫೋಟ ನಡೆದಿದೆ. ಸ್ಫೋಟದಿಂದ ಎಷ್ಟು ಪ್ರಮಾಣದ ಹಾನಿ ಸಂಭವಿಸಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

 ಕಳೆದ ನಾಲ್ಕು ದಿನಗಳ ಹಿಂದಷ್ಟೇ ಈಸ್ಟರ್ ಸಂಡೇಯಂದು ಶ್ರೀಲಂಕಾದಲ್ಲಿ 8 ಬಾಂಬ್ ದಾಳಿಗಳು ನಡೆದಿದ್ದು, 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ತನಿಖೆ ಆರಂಭವಾಗಿದ್ದು, ಹಲವಾರು ಮಂದಿಯನ್ನು ಬಂಧಿಸಲಾಗಿತ್ತು. ಉಗ್ರ ಸಂಘಟನೆ ISIS ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು