ಬಿಜೆಪಿ ಮುಖಂಡ ಶ್ರೀ ರಾಮುಲು ಅವರು ತಮ್ಮ ರಾಜಕೀಯದ ಸೀಕ್ರೇಟ್ ಒಂದನ್ನು ಇದೀಗ ಬಿಚ್ಚಿಟ್ಟಿದ್ದಾರೆ. ತಾವು 2 ಕಡೆ ಸ್ಪರ್ಧೆ ಮಾಡಿದ್ದುದರ ಹಿಂದಿನ ಕಾರಣ ರಿವೀಲ್ ಮಾಡಿದ್ದಾರೆ.

ಹೂವಿನಹಡಗಲಿ: ಬಿಜೆಪಿ ಸರ್ಕಾರ ರಚಿಸಲು ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಹಾಗೂ ಮೊಳಕಾಲ್ಮೂರು ವಿಧಾನ ಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಾಯಿತು ಎಂದು ಶಾಸಕ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವರ ದರ್ಶನ ಪಡೆದ ನಂತರ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ 4 ರಿಂದ 5 ಸಮಿತಿ ರಚನೆ ಮಾಡಿಕೊಂಡಿರುವ ಮೈತ್ರಿ ಸರ್ಕಾರದ ಸಚಿವರು, ಶಾಸಕರು ಬಂದು ಎಷ್ಟೇ ಪ್ರಚಾರ ಮಾಡಿದರೂ ಬಳ್ಳಾರಿ ಜಿಲ್ಲೆಯ ಮತದಾರರ ಮನಸ್ಥಿತಿ ಬದಲಾವಣೆ ಆಗಲ್ಲ. ಮತ್ತೆ ಬಿಜೆಪಿಯ ಅಭ್ಯರ್ಥಿಯನ್ನು ಬೆಂಬಲಿಸಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದರು.

ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ನಾವು ಹಲವಾರು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ನಾವು ಅವರು ಸಮಕಾಲೀನ ರಾಜಕಾರಣಿಗಳು. ಜಿಲ್ಲೆಯ ಜನ ಅವರನ್ನು ಹೊಸದಾಗಿ ನೋಡುತ್ತಿದ್ದಾರೆ ಅಷ್ಟೇ. ಹಿಂದಿನಿಂದ ನಾನು ಮತ್ತು ಶಾಂತಾ ಜನರ ಆಶೀರ್ವಾದದ ಮೇರೆಗೆ ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದೇವೆ. ಮೈತ್ರಿ ಸರ್ಕಾರದ ಸಚಿವರು, ಶಾಸಕರು, ಸಂಸದರ ದಂಡೇ ಬಂದರೂ ಮತದಾರರು ನಮ್ಮ ಕೈಬಿಡಲು ಸಾಧ್ಯವಿಲ್ಲ ಎಂದರು.

ತಪ್ಪನ್ನು ಹೊಟ್ಟೆಗೆ ಹಾಕಿಕೊಂಡು ಬೆಂಬಲಿಸಿ: ಹಿಂದಿನ ವಿಧಾನಸಭಾ ಚುನಾವಣೆಯ ವೇಳೆ ಪಕ್ಷದಲ್ಲಿ ಸಾಕಷ್ಟುತಪ್ಪುಗಳು ನಡೆದರೂ, ಅದಕ್ಕೆ ಹೆಚ್ಚು ಮಾನ್ಯತೆ ನೀಡದೆ ಅವುಗಳನ್ನು ಹೊಟ್ಟೆಯಲ್ಲಿ ಹಾಕಿಕೊಂಡು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.