ಬ್ರಹ್ಮಿಣಿ ಉಟ್ಟಿದ್ದ ಕಾಂಜೀವರಂ ಸೀರೆ  17 ಕೋಟಿ ಮೊತ್ತದ್ದು. ಸೆರಗಿನ ಅಂಚಿನಲ್ಲಿ ವಜ್ರಗಳ ಡಿಸೈನ್ ಆಕರ್ಷಣೀಯವಾಗಿತ್ತು.

ಬೆಂಗಳೂರು (ನ.17): ಗಣಿ ಧಣಿ ಜನಾರ್ಧನ ರೆಡ್ಡಿಯವರು ಏಕೈಕ ಪುತ್ರಿ ಬ್ರಹ್ಮಿಣಿ ಮದುವೆಯನ್ನು ಇಂದ್ರ ಲೋಕವನ್ನೇ ನಾಚಿಸುವಂತೆ ಅದ್ಧೂರಿಯಾಗಿ ಮಾಡಿದ್ದಾರೆ.

ಮದುಮಗಳ ರೇಷ್ಮೇ ಸೀರೆ, ಒಡವೆ, ಮೇಕಪ್ ಗೆ ಎಷ್ಟು ಖರ್ಚು ಮಾಡಿದ್ದಾರೆ? ಏನೆಲ್ಲಾ ವಿಶೇಷತೆಗಳು ಇದ್ದವು ಇಲ್ಲಿದೆ ನೋಡಿ.

ಬ್ರಹ್ಮಿಣಿ ಉಟ್ಟಿದ್ದ ಕಾಂಜೀವರಂ ಸೀರೆ 17 ಕೋಟಿ ಮೊತ್ತದ್ದು. ಸೆರಗಿನ ಅಂಚಿನಲ್ಲಿ ವಜ್ರಗಳ ಡಿಸೈನ್ ಆಕರ್ಷಣೀಯವಾಗಿತ್ತು.

ಸಂಗೀತ ಕಾರ್ಯಕ್ರಮದಲ್ಲಿ ತೊಟ್ಟಿದ್ದ ಕೆಂಪು ಬಣ್ಣದ ಲೆಹಂಗಾದಲ್ಲಿ ಬ್ರಹ್ಮಿಣಿ ಕಂಗೊಳಿಸುತ್ತಿದ್ದರು. ಪ್ರತಿ ಡಿಸೈನ್​ನಲ್ಲೂ ವಜ್ರದ ಅಲಂಕಾರ, ಮುತ್ತುಗಳನ್ನು ಪೋಣಿಸಲಾಗಿತ್ತು.

ಎರಡು ಡಜನ್ ವಜ್ರದ ಬಳೆ, 6 ವಜ್ರ ಖಚಿತ ನೆಕ್ಲೆಸ್, ವಜ್ರದ ಉಂಗುರ, ವಜ್ರದ ಓಲೆ, ವಜ್ರದ ಡಾಬು ವಜ್ರದ ತೋಳಬಂದಿಯನ್ನು ಮದುಮಗಳಿಗೆ ನೀಡಲಾಗಿತ್ತು.

ಒಟ್ಟು 98 ಕೋಟಿಯನ್ನು ಬಟ್ಟೆ, ಒಡವೆ ಖರ್ಚು ಮಾಡಲಾಗಿದೆ.

ವರನ ಶೆರ್ವಾನಿಗೆ ವಜ್ರದ ನೆರಿಗೆಯಿಂದ ಡಿಸೈನ್ ಮಾಡಲಾಗಿತ್ತು. ಅದರ ಬೆಲೆ 9 ಕೋಟಿ. ಒಂದು ಸಮಾರಂಭಕ್ಕೆ ಹಾಕಿದ ಒಡವೆ ಇನ್ನೊಂದು ಸಮಾರಂಭಕ್ಕೆ ಇಲ್ಲ.