ಸಿಪಿಐ ರಾಘವೇಂದ್ರ ಕುಟುಂಬ ಅದು ಆತ್ಮಹತ್ಯೆ ಅಲ್ಲ, ಇದರ ಹಿಂದೆ ಮಾಫಿಯಾ ಕೈವಾಡವಿದೆ. ಸರ್ದಾಮ್ ಎಂಬ ಮಾಫಿಯಾ ಮುಖಂಡನನ್ನು ಬಂಧಿಸಿದಾಗ ಮೇಲಧಿಕಾರಿಯಿಂದ ಹಿಡಿದು ಎಲ್ಲ ರೀತಿಯ ಒತ್ತಡಗಳು ಬಂದಿದ್ದವು. ಇದೇ ಸೇಡು ಇನ್ನೂ ಜೀವಂತವಾಗಿತ್ತು, ಬೆದರಿಕೆ ಕರೆಗಳು ಬರ್ತಿದ್ದವು. ಅಷ್ಟೇ ಅಲ್ಲ, ಮರಳು ಮಾಫಿಯಾ ಜೊತೆ ಕೈವಾಡವಿದ್ದ ಸಹ ಸಿಬ್ಬಂದಿಯಿಂದಲೇ ಒತ್ತಡವಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಮಾಲುರು (ಅ.20): ಮಾಲೂರು ಸಿಪಿಐ ಆತ್ಮಹತ್ಯೆ ಪ್ರಕಣ ತನಿಖೆ ಚುರುಕುಗೊಂಡಿದೆ. ರಾಘವೇಂದ್ರ ಸಾವಿನ ಬಗ್ಗೆ ಇನ್ನೂ ನಿಗೂಢವಾಗಿದೆ.

ಕೌಟುಂಬಿಕ ಕಹಲವೋ ಅಥವಾ,ಮಾಫಿಯಾ ಕೈವಾಡವೋ ಅನ್ನೋ ಶಂಕೆ ಮೂಡಿದೆ.

ಸಿಪಿಐ ರಾಘವೇಂದ್ರ ಕುಟುಂಬ ಅದು ಆತ್ಮಹತ್ಯೆ ಅಲ್ಲ, ಇದರ ಹಿಂದೆ ಮಾಫಿಯಾ ಕೈವಾಡವಿದೆ. ಸರ್ದಾಮ್ ಎಂಬ ಮಾಫಿಯಾ ಮುಖಂಡನನ್ನು ಬಂಧಿಸಿದಾಗ ಮೇಲಧಿಕಾರಿಯಿಂದ ಹಿಡಿದು ಎಲ್ಲ ರೀತಿಯ ಒತ್ತಡಗಳು ಬಂದಿದ್ದವು. ಇದೇ ಸೇಡು ಇನ್ನೂ ಜೀವಂತವಾಗಿತ್ತು, ಬೆದರಿಕೆ ಕರೆಗಳು ಬರ್ತಿದ್ದವು. ಅಷ್ಟೇ ಅಲ್ಲ, ಮರಳು ಮಾಫಿಯಾ ಜೊತೆ ಕೈವಾಡವಿದ್ದ ಸಹ ಸಿಬ್ಬಂದಿಯಿಂದಲೇ ಒತ್ತಡವಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಇನ್ನೂ ಪ್ರಕರಣ ತನಿಖೆಗೆ ಕೋಲಾರ ಎಸ್ಪಿ ದಿವ್ಯಾ ಗೋಪಿನಾಥ್ ವಿಶೇಷ ತಂಡ ರಚನೆ ಮಾಡಿದ್ದಾರೆ. ಕೋಲಾರ ಡಿವೈಎಸ್​ಪಿ ಅಬ್ದುಲ್ ಸತ್ತಾರ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.