ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಸ್ಪಷ್ಟನೆ ನೀಡುವಂತೆ ರೆಬಲ್'ಸ್ಟಾರ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು(ಮೇ.17): ಜೆಡಿಯು ಮಂಡ್ಯ ಜಿಲ್ಲಾಧ್ಯಕ್ಷ ಬಿ.ಎಸ್. ಗೌಡ ಅವರು ಅಂಬರೀಶ್ ಅವರ ಶಾಸಕ ಸ್ಥಾನವನ್ನು ರದ್ದುಪಡಿಸುವಂತೆ ವಿಧಾನಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿರುವ ಹಿನ್ನಲೆಯಲ್ಲಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಸ್ಪಷ್ಟನೆ ನೀಡುವಂತೆ ರೆಬಲ್'ಸ್ಟಾರ್ ಅವರಿಗೆ ಪತ್ರ ಬರೆದಿದ್ದಾರೆ.
ಜೆಡಿಯು ಮಂಡ್ಯ ಜಿಲ್ಲಾಧ್ಯಕ್ಷ ಬಿ.ಎಸ್. ಗೌಡ ಅವರು ಅಳೆದ ತಿಂಗಳು ಸ್ಪೀಕರ್ ಅವರಿಗೆ ಪತ್ರ ಬರೆದು ' ಅಂಬರೀಶ್ ಅವರು ಸಚಿವ ಸ್ಥಾನದಿಂದ ಕೆಳಗಿಳಿದ ನಂತರ ಯಾವುದೇ ಸದನ ಕಲಾಪಗಳಿಗೆ ಭಾಗಿಯಾಗಿಲ್ಲ. ಮೂರಕ್ಕೂ ಹೆಚ್ಚು ಸ್ಥಾನಗಳಿಗೆ ಗೈರು ಹಾಜರಾದರೆ ಅಂತಹವರ ಶಾಸಕ ಸ್ಥಾನವನ್ನು ರದ್ದು ಪಡಿಸುವ ಹಕ್ಕು ಸ್ಪೀಕರ್ ಅವರಿಗಿದೆ. ಈ ಕಾರಣದಿಂದ ಅಂಬರೀಶ್ ಅವರ ಸಚಿವ ಸ್ಥಾನವನ್ನು ರದ್ದುಪಡಿಸುವಂತೆ ಪತ್ರ ಬರೆದ ಕಾರಣದಿಂದ ಸ್ಪೀಕರ್ ಅಂಬಿಗೆ ಪತ್ರ ಬರೆದಿದ್ದಾರೆ.
