ಚೆನ್ನೈ(ಆ.20): ತಮಿಳುನಾಡು ರಾಜಧಾನಿ ಚೆನ್ನೈನ ಪೂರ್ವ ಭಾಗದ ಬೀಚ್’ನಲ್ಲಿ ನೀಲಿ ಬಣ್ಣದ ಅಲೆಗಳು ಕಂಡು ಬಂದಿದ್ದು, ಜನರನ್ನು ಆಶ್ವರ್ಯಚಕಿತಗೊಳಿಸಿದೆ.

ಇಲ್ಲಿನ ತಿರುವಾಯನ್ಮಿಯುರ್ ಬೀಚ್, ಪಲವಕ್ಕಂ ಬೀಚ್ ಹಾಗೂ ಇಂಜಾಬಕ್ಕಂ ಬೀಚ್’ನಲ್ಲಿ ಸಂಜೆ ವೇಳೆಗೆ ನೀಲಿ ಬಣ್ಣದ ಅಲೆಗಳು ಗೋಚರವಾಗಿವೆ.

ಬಯೋಲುಮಿನೆನ್ಸಿನ್ಸ್ ಎಂದು ಕರೆಯುವ ಈ ವಿದ್ಯಮಾನ, ಬಯೋಲುಮಿನೆಸೆಂಟ್ ಫೈಟೊಪ್ಲಾಂಕ್ಟನ್ ಎಂಬ ಪಾಚಿಯಿಂದಾಗಿ ಸಂಭವಿಸುತ್ತದೆ. 

ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದಂತೆ ಈ ಫೈಟೊಪ್ಲಾಂಕ್ಟನ್‌ಗಳು ತಮ್ಮ ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಇದರಿಂದಾಗಿ ಅದು ಅಲೆಗಳ ಮುಖದ ಮೇಲೆ ನೀಲಿ ಹೊಳಪನ್ನು ಹೊರಸೂಸುತ್ತದೆ.

ಸಾಮಾನ್ಯವಾಗಿ 'ಸಮುದ್ರ ಪ್ರಕಾಶ' ಎಂದು ಕರೆಯಲ್ಪಡುವ ಬಯೋಲುಮಿನೆಸೆಂಟ್ ಫೈಟೊಪ್ಲಾಂಕ್ಟನ್ ಪ್ರಭೇದಗಳ ವೈಜ್ಞಾನಿಕ ಹೆಸರು ನೋಕ್ಟಿಲುಕಾ ಸಿಂಟಿಲಾನ್ಸ್.

ಕಳೆದ ವರ್ಷ ಮಾಲ್ಡೀವ್ಸ್‌ನ ಹಿಂದೂ ಮಹಾಸಾಗರದ ಬಯೋಲುಮಿನೆಸೆಂಟ್ ಉಬ್ಬರವಿಳಿತಗಳು ಕಂಡುಬಂದಿದ್ದವು. ಅಲ್ಲದೇ ಪೆಸಿಫಿಕ್ ಮಹಾಸಾಗರದ ಕರಾವಳಿ ಕ್ಯಾಲಿಫೋರ್ನಿಯಾದಲ್ಲಿ ಈ ವಿದ್ಯಮಾನ ಆಗಾಗ ಗೋಚರವಾಗುತ್ತದೆ.