ಎಲ್ಲೆಲ್ಲೂ ನೀರಿದ್ದರೂ ಕುಡಿಯುವುದಕ್ಕೆ ಮಾತ್ರ ನೀರಿಲ್ಲ. ಮಳೆಯಲ್ಲಿ ಮನೆಯೇ ಕೊಚ್ಚಿ ಹೋಗಿದೆ. ಅಗತ್ಯ ವಸ್ತುಗಳು ಇನ್ನೆಲ್ಲಿ? ಅಬ್ಬಾ ಪ್ರಕೃತಿಯ ಈ ಮುನಿಸನ್ನು ಎದುರಿಸುವುದಾದರೂ ಹೇಗೆ? ಇಂಥ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ನೀಡುವ ನೆರವು ಅನುಕೂಲಕ್ಕೆ ಬರುತ್ತದೆ. ಭಾರತೀಯ ದಕ್ಷಿಣ ರೈಲ್ವೆ ಪರಿಸ್ಥತಿಗೆ ಸ್ಪಂದಿಸಿದ್ದು ಹೀಗೆ.
ಚೆನ್ನೈ: ಕೇರಳದಲ್ಲಿ ಮಳೆಗೆ ಸಿಲುಕಿ ಕುಡಿಯುವ ನೀರಿಗೂ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿರಾಶ್ರಿತರಿಗೆ ದಕ್ಷಿಣ ರೈಲ್ವೆಯು ಶುಕ್ರವಾರ ಮೂರು ವಿಶೇಷ ರೈಲುಗಳಲ್ಲಿ ಕುಡಿಯುವ ನೀರನ್ನು ರವಾನಿಸಿದೆ. ಅದಷ್ಟೇ ಅಲ್ಲದೆ ಇತರ ರೈಲುಗಳ ಮುಖಾಂತರವಾಗಿ 1 ಲಕ್ಷಕ್ಕೂ ಅಧಿಕ ನೀರಿನ ಬಾಟಲಿಗಳನ್ನು ಕಳುಹಿಸಲಾಗಿದೆ. 7 ಓಪನ್ ವ್ಯಾಗನ್‌ಗಳಿರುವ 2.8 ಲಕ್ಷ ಲೀಟರ್ ನೀರು ಭರ್ತಿಯಾಗಿರುವ ವಿಶೇಷ ರೈಲು ಶುಕ್ರವಾರ 4 ಗಂಟೆಗೆ ಇರೋಡ್ ಜಂಕ್ಷನ್‌ನಿಂದ ತೆರಳಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Scroll to load tweet…
ಕೇರಳದಲ್ಲಿ ಪ್ರವಾಹ ಸ್ಥಿತಿಗೆ ಅಲ್ಲಿನ ಜನ ತತ್ತರಿಸಿದ್ದು, ಈಗಾಗಲೇ 173 ಮಂದಿ ಸಾವಿಗೀಡಾಗಿದ್ದಾರೆ, ಸಾವಿರಾರು ಎಕರೆ ಬೆಳೆ ನಾಶವಾಗಿದೆ.

ಕರ್ನಾಟಕದ ಕೊಡಗಿನಲ್ಲಿಯೂ ಪರಿಸ್ಥಿತಿ ಇದಕ್ಕಿಂತ ವಿಭಿನ್ನವಾಗಿಲ್ಲ. ಎಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬಂದಿದ್ದು, ಸಹಕರಿಸುವವರು ಸುವರ್ಣ ನ್ಯೂಸ್ ಕಚೇರಿಯನ್ನು ಸಂಪರ್ಕಿಸಬಹುದು.
ಕೇರಳ ಮತ್ತು ಕೊಡಗು ನೆರೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

