ನವದೆಹಲಿ: ದೇಶದ ಅತೀ ವೇಗದ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಪರ್ಯಾಯ ಎಂದೇ ಭಾವಿಸಲಾಗಿರುವ ಹಾಗೂ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಇಂಜಿನ್‌ ರಹಿತ ಟ್ರೈನ್‌-18 ರೈಲಿಗೆ ಕೇಂದ್ರ ಸರ್ಕಾರದ ವಿದ್ಯುತ್‌ ಪರಿವೀಕ್ಷಣಾಲಯ ಇಲಾಖೆ ಅನುಮೋದನೆ ನೀಡಿದೆ.

ರೈಲಿನ ಕುರಿತು ಮೂರು ದಿನಗಳ ಕಾಲ ಪರೀಕ್ಷೆ ಬಳಿಕ ಸಂಚಾರಕ್ಕೆ ಅನುಮೋದನೆ ನೀಡಲಾಗಿದೆ. 

ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಾಣಸಿ ಹಾಗೂ ದೆಹಲಿ ಮಾರ್ಗದ ಟ್ರೈನ್‌-18 ಸೇವೆಗೆ ಇನ್ನೊಂದು ವಾರದಲ್ಲಿ ಮೋದಿ ಅವರೇ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.