Asianet Suvarna News Asianet Suvarna News

2 ವರ್ಷದ ಬದಲು 4 ವರ್ಷದ ಬಿಎಡ್‌ ಕೋರ್ಸ್

ಎರಡು ವರ್ಷಗಳ ಬ್ಯಾಚುಲರ್‌ ಆಫ್‌ ಎಜುಕೇಶನ್‌ (ಬಿಎಡ್‌) ಕೋರ್ಸ್‌ ಅನ್ನು ರದ್ದುಗೊಳಿಸಲು ಸರ್ಕಾರ ಉದ್ದೇಶಿಸಿದೆ. ಇದರ ಬದಲು 4 ವರ್ಷಗಳ ಸಮಗ್ರ ಶಿಕ್ಷಕ ತರಬೇತಿ ಯೋಜನೆಗೆ ಮಾತ್ರ ಅವಕಾಶ ಕಲ್ಪಿಸಲು ಉದ್ದೇಶಿಸಿದೆ.

Soon BEd to become 4 year course

ನವದೆಹಲಿ: ಎರಡು ವರ್ಷಗಳ ಬ್ಯಾಚುಲರ್‌ ಆಫ್‌ ಎಜುಕೇಶನ್‌ (ಬಿಎಡ್‌) ಕೋರ್ಸ್‌ ಅನ್ನು ರದ್ದುಗೊಳಿಸಲು ಸರ್ಕಾರ ಉದ್ದೇಶಿಸಿದೆ. ಇದರ ಬದಲು 4 ವರ್ಷಗಳ ಸಮಗ್ರ ಶಿಕ್ಷಕ ತರಬೇತಿ ಯೋಜನೆಗೆ ಮಾತ್ರ ಅವಕಾಶ ಕಲ್ಪಿಸಲು ಉದ್ದೇಶಿಸಿದೆ.

ಬಿಎ-ಬಿಎಡ್‌ ಮತ್ತು ಬಿಎಸ್‌ಸಿ-ಬಿಎಡ್‌ ಕೋರ್ಸ್‌ಗಳ ಪಠ್ಯವನ್ನು ಪುನರ್‌ ಸಂಯೋಜಿಸಲು ಶಿಕ್ಷಕರ ಶಿಕ್ಷಣ ರಾಷ್ಟ್ರೀಯ ಮಂಡಳಿ (ಎನ್‌ಸಿಟಿಇ)ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿದೆ.

ಒಂದು ವರ್ಷ ಇದ್ದ ಬಿಎಡ್‌ ಕೋರ್ಸ್‌ ಅನ್ನು 2014ರಲ್ಲಿ 2 ವರ್ಷದ ಕೋರ್ಸ್‌ ಆಗಿ ಪರಿವರ್ತಿಸಲಾಗಿತ್ತು. ಆದರೆ, ಅದನ್ನು ರದ್ದುಗೊಳಿಸಿ 4 ವರ್ಷದ ಸಮಗ್ರ ಶಿಕ್ಷಕ ತರಬೇತಿ ಯೋಜನೆಯನ್ನು ಆರಂಭಿಸಲಾಗಿದೆ. ಪಿಯುಸಿ ಮುಗಿಸಿದವರು 4 ವರ್ಷದ ಬಿಎ ಬಿಎಡ್‌ ಅಥವಾ ಬಿಎಸ್ಸಿ ಬಿಎಡ್‌ ಕೋರ್ಸ್‌ ಆಯ್ಕೆ ಮಾಡಿಕೊಳ್ಳಲು ಅರ್ಹತೆ ಹೊಂದಿರುತ್ತಾರೆ. ಬಿಟೆಕ್‌ ಮತ್ತು ಎಂಬಿಬಿಎಸ್‌ ಕೋರ್ಸ್‌ಗಳ ರೀತಿಯಲ್ಲೇ ಬಿಎಡ್‌ ಶಿಕ್ಷಣ ನೀಡಲು ಸರ್ಕಾರ ಬಯಸಿದೆ ಎಂದು ಎನ್‌ಸಿಟಿಇ ಮೂಲಗಳು ತಿಳಿಸಿವೆ.

Follow Us:
Download App:
  • android
  • ios