ಸಂಜೆ ಅಥವಾ ರಾತ್ರಿಯ ವೇಳೆಗೆ ಸರ್ಕಾರ ಈ ಬಗ್ಗೆ ಆದೇಶ ಪ್ರಕಟಿಸಲಿದೆ. ಇನ್ನು ಮೂವರು ಹೆಚ್ಚುವರಿ ಪೊಲೀಸ್​ ಆಯುಕ್ತರುಗಳೂ ವರ್ಗವಾವಣೆಯಾಗಲಿದ್ದಾರೆ.

ಬೆಂಗಳೂರು ಪೊಲೀಸ್​ ಕಮೀಷನರೇಟ್​ನಲ್ಲಿ ಬಾರೀ ಬಲಾವಣೆಯಾಗಲಿದೆ. ಹೋಸ ವರ್ಷಕ್ಕೆ ಹೊಸ ಪೊಲೀಸ್​ ಆಯುಕ್ತರು ಬರಲಿದ್ದಾರೆ. ಪೊಲೀಸ್​ ಆಯುಕ್ತ ಎನ್​ ಎಸ್​ ಮೇಘರಿಕ್​ ವರ್ಗಾವಣೆಯಾಗಲಿದ್ದು, ಹಿರಿಯ ಐಪಿಎಸ್​ ಅಧಿಕಾರಿ ಪ್ರವೀಣ್​ ಸೂದ್​ ನೂತನ ಪೊಲೀಸ್​ ಆಯುಕ್ತರಾಗಲಿದ್ದಾರೆ. ಈ ಮೂಲಕ ಒಂದು ವರ್ಷ ಎಂಟು ತಿಂಗಳ ಕಾಲ ನಗರ ಪೊಲೀಸ್​ ಆಯುಕ್ತರಾಗಿದ್ದ ಎನ್​ ಎಸ್​ ಮೇಘರಿಕ್​ ವರ್ಗವಾಗಲಿದ್ದಾರೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಸರ್ಕಾರ ಈ ಬಗ್ಗೆ ಆದೇಶ ಪ್ರಕಟಿಸಲಿದೆ. ಇನ್ನು ಮೂವರು ಹೆಚ್ಚುವರಿ ಪೊಲೀಸ್​ ಆಯುಕ್ತರುಗಳೂ ವರ್ಗವಾವಣೆಯಾಗಲಿದ್ದಾರೆ. ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್​ ಆಯುಕ್ತ ಪಿ.ಹರಿಶೇಖರನ್​ ವರ್ಗಾವಣೆಯಾಗಲಿದ್ದು ಮಂಗಳೂರು ಪೊಲೀಸ್​ ಕಮೀಷನರ್​ ಹುದ್ದೆಗೆ ವರ್ಗಾವಣೆಯಾಗಲಿದ್ದಾರೆ. ಪೂರ್ವ ವಿಭಾಗಕ್ಕೆ ಬಿ.ಕೆ ಸಿಂಗ್​ ಹೆಚ್ಚುವರಿ ಪೊಲೀಸ್​ ಆಯುಕ್ತರಾಗಲಿದ್ದಾರೆ. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್​ ಆಯುಕ್ತ ಚರಣ್​ ರೆಡ್ಡಿ ವರ್ಗವಾಗಲಿದ್ದು ಅವರ ಜಾಗಕ್ಕೆ ಐಪಿಎಸ್​ ಅಧಿಕಾರಿ ಮಾಲಿನಿ ಕೃಷ್ಣ ಮೂರ್ತಿ ಬರಲಿದ್ದಾರೆ. ಇನ್ನು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಶರತ್​ ಚಂದ್ರ ವರ್ಗಾವಣೆಯಾಗಲಿದ್ದು ಅವರ ಜಾಗಕ್ಕೆ ಎಸ್​. ರವಿ ಬರಲಿದ್ದಾರೆ. ಜೊತೆಗೆ ಕೇಂದ್ರ ವಿಭಾಗ ಮತ್ತು ಪೂರ್ವ ವಿಭಾಗದ ಡಿಸಿಪಿಗಳು ವರ್ಗಾವಣೆಯಾಗಲಿದ್ದಾರೆ. ಈ ಬಗ್ಗೆ ಸಂಜೆಯ ವೇಳೆಗೆ ಸರ್ಕಾರ ಅಧಿಕೃತ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.