ಜೋಧ್ ಪುರ : ಬಡ ವಿಧವೆಯ ಪುತ್ರನೀಗ ತನ್ನ ತಾಯಿ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದಾನೆ. ತನ್ನ ಮಗನ ಸಾಧನೆಯನ್ನು ತಾಯಿ ಹೆಮ್ಮೆಯಿಂದ ಕೊಂಡಾಡಿದ್ದಾರೆ. 

ಜೋಧ್ ಪುರ ಜಿಲ್ಲೆಯ   ಪಹ್ಲೋಡಿ ಪ್ರದೇಶದ ವಿಮಲಾ ದೇವಿ ಎಂಬ ಬಡ ವಿಧವೆಯ  ಪುತ್ರ ಅಶೋಕ್ ಈಗ ವೈದ್ಯರಾಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದು, 2013ರಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದ ಅವರು ಇದೀಗ ಉದಯ್ ಪುರದ ಆರ್ ಎನ್ ಟಿ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಇಂಟರ್ನ್ ಶಿಪ್ ನಡೆಸುತ್ತಿದ್ದಾರೆ. 
 
ಇವರ ತಂದೆ ಕಳೆದ 8 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅದಾದ ಬಳಿಕ ಇವರ ಕುಟುಂಬ ಸಾಕಷ್ಟು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯ್ತು. ಇಬ್ಬರು ಪುಟ್ಟ ಮಕ್ಕಳಿದ್ದ ಈ ತಾಯಿಯೇ ಕುಟುಂಬವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕಾಯ್ತು.

ದಿನಗೂಲಿಯನ್ನು ಮಾಡಿ ಮಕ್ಕಳನ್ನು  ಸಲಹಿ ವಿದ್ಯಾಭ್ಯಾಸ  ಕೊಡಿಸಿದ್ದು, ಇದೀಗ ತಾಯಿ ಹೆಮ್ಮೆ ಪಡುವಂತಹ ಸಾಧನೆಯನ್ನು ಈ ಮಕ್ಕಳು ಮಾಡಿದ್ದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

[ಚಿತ್ರ - ಹಿಂದೂಸ್ಥಾನ್ ಟೆಮ್ಸ್ ]