Asianet Suvarna News Asianet Suvarna News

ಸೋನಿಯಾ ಗಾಂಧಿ ಜಗತ್ತಿನ ನಂ 4 ಶ್ರೀಮಂತೆ?

ಸೋನಿಯಾ ಗಾಂಧಿ ಜಗತ್ತಿನ 4 ನೇ ಶ್ರೀಮಂತೆ | 2009 ರಿಂದ ಇಲ್ಲಿಯವರೆಗೆ ಸೋನಿಯಾ ಗಾಂಧಿ ಒಟ್ಟಾರೆ ಆದಾಯ ಎಷ್ಟು ಎಂಬ ಬಗ್ಗೆ ಗೊಂದಲಮಯವಾಗಿದೆ | ನಿಜಕ್ಕೂ ಅಷ್ಟು ಶ್ರೀಮಂತೆನಾ ಸೋನಿಯಾ ಗಾಂಧಿ? 

Sonia Gandhi world's 4 th richest person?
Author
Bengaluru, First Published Oct 1, 2018, 9:23 AM IST

ಬೆಂಗಳೂರು (ಅ. 01): ಸೋನಿಯಾ ಗಾಂಧಿ ಜಗತ್ತಿನ 4 ನೇ ಶ್ರೀಮಂತೆ ಎಂಬ ಸಂದೇಶ ಪ್ರಕಟವಾದ ಪತ್ರಿಕೆಯ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಅದರೊಂದಿಗೆ  ‘ಅಂಬಾನಿ, ಅದಾನಿ ಶ್ರೀಮಂತರಾಗಲು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದರು, ಎಲ್ಲೆಡೆ ಕೈಗಾರಿಕೆಗಳನ್ನು ತೆರೆದಿದ್ದರು. ಆದರೆ ಸೋನಿಯಾ ಗಾಂಧಿ ಶ್ರೀಮಂತರಾಗಿದ್ದು ಹೇಗೆ?’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ‘ಸಪೋರ್ಟ್ ಮೋದಿ ಜಿ ಆ್ಯಂಡ್ ಬಿಜೆಪಿ’ ಎಂಬ ಫೇಸ್‌ಬುಕ್ ಪೇಜ್ ಈ ಸಂದೇಶವನ್ನು ಮೊದಲಿಗೆ ಪೋಸ್ಟ್ ಮಾಡಿದೆ. ಈ ಸಂದೇಶ 4000 ಬಾರಿ ಶೇರ್ ಆಗಿದೆ.

ಮತ್ತೊಂದೆಡೆ ಸೋನಿಯಾ ಗಾಂಧಿ ಜಗತ್ತಿನ ಶ್ರೀಮಂತ ಮಹಿಳೆಯರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ ಎಂದೂ ಹೇಳಲಾಗುತ್ತಿದೆ. ಸದ್ಯ ಈ ಸಂದೇಶದ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಹಿಂದೆ ಸೋನಿಯಾ ಗಾಂಧಿ ವಿಶ್ವದ ನಾಲ್ಕನೇ ಶ್ರೀಮಂತ ರಾಜಕಾರಣಿ ಎಂಬ ಸಂದೇಶವೂ ವೈರಲ್ ಆಗಿತ್ತು. ಆದರೆ ನಿಜಕ್ಕೂ ಸೋನಿಯಾ ಗಾಂಧಿ ಜಗತ್ತಿನ ನಂ.4 ಶ್ರೀಮಂತರಾ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ.

‘ಆಲ್ಟ್‌ನ್ಯೂಸ್’ ಈ ದಿನಪತ್ರಿಕೆಯ ತುಣುಕು ಹಿಡಿದು ಹುಡುಕ ಹೊರಟಾಗ ಇದು 2012 ರ ಮಾರ್ಚ್ 14 ರಂದು ದೈನಿಕ್ ಜಾಗರಣ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಫೋಟೋ ಎಂಬುದು ಪತ್ತೆಯಾಗಿದೆ. ವಾಸ್ತವಾವಾಗಿ 2009 ರಿಂದ ಇಲ್ಲಿಯವರೆಗೆ ಸೋನಿಯಾ ಗಾಂಧಿ ಒಟ್ಟಾರೆ ಆದಾಯ ಎಷ್ಟು ಎಂಬ ಬಗ್ಗೆ ಗೊಂದಲಮಯ ಲೇಖನಗಳು ಮಾಧ್ಯಮಗಳಲ್ಲಿವೆ. ಎಲ್ಲೂ ನಿಖರ ಮಾಹಿತಿಇಲ್ಲ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

-ವೈರಲ್ ಚೆಕ್ 

Latest Videos
Follow Us:
Download App:
  • android
  • ios