‘ಗರಿಷ್ಠ ಪ್ರಚಾರ, ಕನಿಷ್ಠ ಸರ್ಕಾರ’ :ಮೋದಿಗೆ ಸೋನಿಯಾ ಟಾಂಗ್

First Published 8, Feb 2018, 3:18 PM IST
Sonia Gandhi Slams Modi Government
Highlights
  • ‘ಗರಿಷ್ಠ ಪ್ರಚಾರ, ಕನಿಷ್ಠ ಸರ್ಕಾರ’
  • 'ಗರಿಷ್ಠ ಮಾರ್ಕೆಟಿಂಗ್ , ಕನಿಷ್ಠ ಸಾಧನೆ'

ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಇದು ‘ಗರಿಷ್ಠ ಪ್ರಚಾರ, ಕನಿಷ್ಠ ಸರ್ಕಾರ’ವಾಗಿದೆಯೆಂದು ಹೇಳಿದ್ದಾರೆ.

ತಮ್ಮದು ‘ಗರಿಷ್ಠ ಆಡಳಿತ ಕನಿಷ್ಠ ಸರ್ಕಾರ’ವಾಗಿರುವುದು ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ ಯುಪಿಎ ಸರ್ಕಾರದ ಯೋಜನೆಗಳನ್ನೇ ಬೇರೆ ಬೇರೆ ಹೆಸರುಗಳಿಂದ ಪರಿಚಯಿಸುತ್ತಿದ್ದಾರೆ. ಇದೀಗ ‘ಗರಿಷ್ಠ ಮಾರ್ಕೆಟಿಂಗ್ , ಕನಿಷ್ಠ ಸಾಧನೆ’ಯ ಸರ್ಕಾರವಾಗಿದೆ ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.

ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳು ಜತೆಗೂಡಿ ಕೆಲಸ ಮಾಡುವ ಅಗತ್ಯವಿದೆಯೆಂದು ಸೋನಿಯಾ ಗಾಂಧಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಆ ಮೂಲಕ ದೇಶದಲ್ಲಿ ಪ್ರಜಾತಂತ್ರ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಜಾತ್ಯತೀತತೆಯನ್ನು ಮರುಸ್ಥಾಪಿಸಬಹುದು ಎಂದು ಅವರು ಹೇಳಿದ್ದಾರೆ.

loader