ಕಾಂಗ್ರೆಸ್'ನ 6 ರಾಜ್ಯ ಘಟಕಗಳು ರಾಹುಲ್'ಗೆ ಅಧ್ಯಕ್ಷ ಸ್ಥಾನ ಕೊಡಬೇಕೆಂದು ಮನವಿ ಮಾಡಿ ನಿರ್ಣಯ ಮಂಡಿಸಿವೆ. ಉತ್ತರಾಖಂಡ್ ಘಟಕದ ಕಾಂಗ್ರೆಸ್ ನಿನ್ನೆ ಶುಕ್ರವಾರ ನಿರ್ಣಯ ಮಂಡಿಸಿದೆ. ಈ ಹಿಂದೆ ರಾಹುಲ್ ವಿರುದ್ಧ ಕಾಂಗ್ರೆಸ್'ನ ಕೆಲ ಹಿರಿಯ ನಾಯಕರಲ್ಲಿ ಅಪಸ್ವರ ಎದ್ದಿದ್ದು ನಿಜವೇ ಆದರೂ ಈಗ ಪರಿಸ್ಥಿತಿ ಬದಲಾದಂತಿದೆ.
ನವದೆಹಲಿ(ಅ. 14): ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡಲಾಗುವುದನ್ನು ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಖಚಿತಪಡಿಸಿದ್ದಾರೆ. ಇದರೊಂದಿಗೆ ರಾಹುಲ್ ಕಾಂಗ್ರೆಸ್'ನ ಪಟ್ಟ ಸಿಗುವುದು ನಿಶ್ಚಿತವಾಗಿದೆ. ಬಹಳ ದಿನಗಳಿಂದ ಕೇಳಿಬರುತ್ತಿದ್ದ ಸುದ್ದಿ ಈಗ ಪಕ್ಕಾ ಆಗಿದೆ.
"ರಾಹುಲ್'ಗೆ ಅಧ್ಯಕ್ಷ ಸ್ಥಾನ ಸಿಗುವುದೇ ಎಂದು ನೀವು ಮಾಧ್ಯಮದವರು ಬಹಳ ಕಾಲದಿಂದ ಕೇಳಿಕೊಂಡು ಬಂದಿದ್ದೀರಿ. ಇದು ಶೀಘ್ರದಲ್ಲೇ ನೆರವೇರುವುದು" ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುಸ್ತಕ ಬಿಡುಗಡೆ ಸಮಾರಂಭದ ವೇಳೆ ಪತ್ರಕರ್ತರೊಂದಿಗೆ ಸೋನಿಯಾ ಗಾಂಧಿ ಮಾತನಾಡುತ್ತಿದ್ದರು.