ಉಡುಪಿ (ಸೆ.19): ಉದ್ಯಮಿ ಭಾಸ್ಕರಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣದಲ್ಲಿ ಸಿಐಡಿ ಮಹತ್ವದ ತನಿಖೆ ಆರಂಭಿಸಿದೆ. ಇದೇ ಮೊದಲ ಬಾರಿಗೆ ಪ್ರಧಾನ ಆರೋಪಿ ಪುತ್ರ ನವನೀತನನ್ನು ವಶಕ್ಕೆ ಪಡೆದಿದೆ.
ಇಂದು ಉಡುಪಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಯ್ತು. ವಾದ ಮಂಡಿಸಿದ ಆರೋಪಿ ಪರ ವಕೀಲರು, ನವನೀತ ಅಸ್ತಮಾ ರೋಗಿಯಾಗಿದ್ದಾನೆ. ಹೀಗಾಗಿ ಸಿಐಡಿ ವಶಕ್ಕೆ ನೀಡಬಾರದೆಂದು ಮನವಿ ಮಾಡಿದರು.
ಈ ವಾದಕ್ಕೆ ನ್ಯಾಯಾಲಯ ಮನ್ನಣೆ ನೀಡಲಿಲ್ಲ. ಎರಡು ದಿನಗಳ ತನಿಖೆಗೆ ನವನೀತನನ್ನು ಸಿಐಡಿ ವಶಕ್ಕೆ ನೀಡಲಾಗಿದೆ. ಇಂದು ರಾಜೇಶ್ವರಿ ಹಾಗೂ ಸಾಕ್ಷ್ಯ ನಾಶ ಮಾಡಿದ ಶ್ರೀನಿವಾಸ ಭಟ್ಟ ಹಾಗೂ ರಾಘವೇಂದ್ರನಿಗೆ ಅಕ್ಟೋಬರ್ 3 ರವೆರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
