ಅತೃಪ್ತರಿಗೆ ಡಿ.ಕೆ ಶಿವಕುಮಾರ್ ಹೊಸ ಭರವಸೆ

Some MLAs were unhappy, we have sorted the issues: DK Shivakumar
Highlights

ತಾಳ್ಮೆ, ಸಂಯಮದಿಂದ ಕಾಯ್ದರೆ ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಅವಕಾಶಗಳು ಸಿಗಲಿವೆ ಎಂದು  ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು: ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗಲಿಲ್ಲ ಎಂದ ಮಾತ್ರಕ್ಕೆ ಅಧಿಕಾರದ ಎಲ್ಲ ಬಾಗಿಲುಗಳು ಮುಚ್ಚಿ ಹೋಗುವು ದಿಲ್ಲ. ತಾಳ್ಮೆ, ಸಂಯಮದಿಂದ ಕಾಯ್ದರೆ ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಅವಕಾಶಗಳು ಸಿಗಲಿವೆ ಎಂದು  ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಅತೃಪ್ತ ಶಾಸಕರ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಹಿಂದೆ (ಸಿದ್ದರಾಮಯ್ಯ ಆಡಳಿತದಲ್ಲಿ) ನಾನೂ ಕೂಡ 7 ತಿಂಗಳು ಅಧಿಕಾರ ಇಲ್ಲದಿದ್ದರೂ ತಡೆದುಕೊಂಡು ಇರಲಿಲ್ಲವಾ? ಪರಮೇಶ್ವರ್ ಅವರನ್ನೂ ಸುಮ್ಮನೆ ಕೂರಿಸಿರಲಿಲ್ಲವಾ? ಧರ್ಮ ಸಿಂಗ್ ಕಾಲದಲ್ಲೂ ನನ್ನನ್ನು ಸುಮ್ಮನೆ ಕೂರಿಸಿದ್ದರು. ಆಗ ನಾವು ತಾಳ್ಮೆಯಿಂದ ಇರಲಿಲ್ಲವಾ? ಮೊದಲ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದ ಮಾತ್ರಕ್ಕೆ ಅಧಿಕಾರದ ಬಾಗಿಲು ಮುಚ್ಚಿದಂತಲ್ಲ, ತಾಳ್ಮೆಯಿಂದ ಕಾಯ್ದರೆ ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಅವಕಾಶಗಳು ಸಿಗಲಿವೆ ಎಂದು ಹೇಳಿದರು.

loader