ಆತ ದೇಶ ಸೇವೆಗೆಂದೆ ಸೈನ್ಯಕ್ಕೆ ಸೇರಿದ್ದ. ಕಳೆದ ಎರಡು ವರ್ಷಗಳಿಂದ ಸೇನೆಯಲ್ಲಿ ಉತ್ಸುಕನಾಗಿ ಕೆಲಸ ಮಾಡ್ತಿದ್ದ. ಕಳೆದ ತಿಂಗಳು ಬೆಂಗಳೂರಿಗೆ ಬಂದು ಕುಟುಂಬ ಸದಸ್ಯರ ಜೊತೆ ಕಾಲ ಕಳೆದು ಹೋಗಿದ್ದ. ಆದರೆ ಅದೇನು ಆಯ್ತು ಗೊತ್ತಿಲ್ಲ, ನಿನ್ನೆ ಬೆಳಗ್ಗೆ ಯೋಧ ನರೇಂದ್ರ ಸೇನಾ ಕ್ಯಾಂಪ್'ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.
ಜಮ್ಮು-ಕಾಶ್ಮೀರ (ಅ.09): ಆತ ದೇಶ ಸೇವೆಗೆಂದೆ ಸೈನ್ಯಕ್ಕೆ ಸೇರಿದ್ದ. ಕಳೆದ ಎರಡು ವರ್ಷಗಳಿಂದ ಸೇನೆಯಲ್ಲಿ ಉತ್ಸುಕನಾಗಿ ಕೆಲಸ ಮಾಡ್ತಿದ್ದ. ಕಳೆದ ತಿಂಗಳು ಬೆಂಗಳೂರಿಗೆ ಬಂದು ಕುಟುಂಬ ಸದಸ್ಯರ ಜೊತೆ ಕಾಲ ಕಳೆದು ಹೋಗಿದ್ದ. ಆದರೆ ಅದೇನು ಆಯ್ತು ಗೊತ್ತಿಲ್ಲ, ನಿನ್ನೆ ಬೆಳಗ್ಗೆ ಯೋಧ ನರೇಂದ್ರ ಸೇನಾ ಕ್ಯಾಂಪ್'ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.
ನಿನ್ನೆ ಬೆಳಗ್ಗೆ ಜಮ್ಮು-ಕಾಶ್ಮೀರದ ಸೇನಾ ಕ್ಯಾಂಪ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಯೋಧ ನರೇಂದ್ರ ಅನುಮಾನಾಸ್ಪದವಾಗಿ ಸಾವನನ್ನಪ್ಪಿದ್ದಾನೆ. ಯೋಧ ನರೇಂದ್ರ ಮೂಲತಃ ಬೆಂಗಳೂರಿನ ರಾಜಗೋಪಾಲನಗರದ ನಿವಾಸಿ, ಕಳೆದ ಎರಡು ವರ್ಷಗಳಿಂದ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ನಿನ್ನೆ ಬೆಳಗ್ಗೆ 7 ಗಂಟೆಯ ಸುಮಾರಿಗೆ ಸೇನೆಯಿಂದ ಕರೆ ಬಂದಿದೆ. ಯೋಧ ನರೇಂದ್ರನ ತಂದೆ ರಾಜು ಅವರೊಂದಿಗೆ ಮಾತನಾಡಿ ನಿಮ್ಮ ಮಗ ಆರ್. ನರೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಹೇಳಿದ್ದಾರೆ.
ಯೋಧ ನರೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋ ಸುದ್ದಿ ಕೇಳಿದ ತಂದೆ, ತಾಯಿ ಕುಸಿದು ಬಿದ್ದಿದ್ದಾರೆ. ನಮ್ಮ ಮಗ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡಿಲ‌್ಲ ಅಂತಾ ಯೋಧನ ತಾಯಿ ಪುಷ್ಪ ಹೇಳುತ್ತಿದ್ದಾರೆ. ಜೊತೆಗೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ನನ್ನ ಮಗನ ಸಾವಿನ ಕಾರಣ ತಿಳಿಸಬೇಕು ಅಂತಾ ಒತ್ತಾಯಿಸಿದ್ದಾರೆ.
ನರೇಂದ್ರ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ, 20ನೇ ವಯಸ್ಸಿಗೆ ಸೇನೆಗೆ ಸೇರಿ ದೇಶ ಸೇವೆಯಲ್ಲಿ ತೊಡಗಿದ್ದ. ಜೊತೆಗೆ ತಂಗಿ ತಮ್ಮನನ್ನು ಓದಿಸುತ್ತಿದ್ದ, ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು. ಹಾಗೂ ತಮ್ಮನನ್ನು ಬ್ಯಾಂಕ್ ಮ್ಯಾನೇಜರ್ ಆಗಿಮಾಡಬೇಕು ಅಂತಾ ಕನಸ್ಸು ಕಂಡಿದ್ದ ಅಂತಾರೆ ನರೇಂದ್ರ ಸ್ನೇಹಿತರು. ಯೋಧ ನರೇಂದ್ರ ಸಾವಿನ ಕುರಿತಾಗಿ ಕುಟುಂಬ ಸದಸ್ಯರಿಗೆ ಸ್ಪಷ್ಟ ಕಾರಣ ತಿಳಿದಿಲ್ಲ. ದೇಶ ಸೇವೆ ಮಾಡಲೆಂದು ಸ್ವ ಇಚ್ಚೆಯಿಂದ ಹೋದವನು ನರೇಂದ್ರ. ನೂರಾರು ಕನಸ್ಸು ಕಂಡುವನು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಅನ್ನೋ ಮಾತುಗಳು ಕೇಳಿ ಬಂದಿವೆ.. ಹೀಗಾಗಿ ಮೊದಲು ಯೋಧ ನರೇಂದ್ರ ಸಾವಿನ ಕುರಿತಾಗಿ ತನಿಖೆಯಾಗಬೇಕು ಹಾಗೂ ಅನಾಥವಾಗಿರುವ ಕುಟುಂಬಕ್ಕೆ ರಾಜ್ಯ ಸರ್ಕಾರ ನೆರವಾಗಬೇಕಿದೆ.
