ಮೈಸೂರು[ಜ.31]  ‘ಮೋದಿಗೆ ಧಮ್ ಇದ್ರೆ  ಜನಸಂಖ್ಯೆ ಅಧಾರದ ಮೇಲೆ ಮೀಸಲಾತಿ ಜಾರಿ ತರಲಿ. ಸಮಾನ ಅವಕಾಶ ಎಲ್ಲರಿಗೂ ಸಿಗಬೇಕು. ಇಷ್ಟು ವರ್ಷ ನಮ್ಮನ್ನಾಳಿದ ಯಾವುದೇ ಪ್ರಧಾನಿ ಸಂವಿಧಾನದ ಮೌಲ್ಯಗಳನ್ನು ನಾಶ ಮಾಡಿಲ್ಲ. ಆದರೆ ಇವತ್ತು ಆರ್ ಎಸ್ಎಸ್ ಹಾಗೂ ಶ್ರೀಮಂತ ಜನರ ಪ್ರತಿನಿಧಿ ನರೇಂದ್ರ ಮೋದಿ ನಮ್ಮ ಬಹುಜನರ ಹಕ್ಕಿನ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ’ ಎಂದು  ಚಿಂತಕ ಮಹೇಶ್ ಚಂದ್ರ ಗುರು  ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ  ಶೇ. 10 ಮೀಸಲಾತಿ ವಿರೊಧಿಸಿ ಪ್ರಗತಿಪರರಿಂದ ಖಾಸಗಿ ಹೋಟೆಲ್ ನಲ್ಲಿ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿ, ನಮಗೆ ಬುಲೆಟ್ ಬೇಕಿಲ್ಲ, ಬ್ಯಾಲೆಟ್ ಪೇಪರ್ ಸಾಕು ಇವರನ್ನ ಮನೆಗೆ ಕಳಿಸಲು. ಮೋದಿ ಸಂವಿಧಾನದ ಮೌಲ್ಯಗಳನ್ನು ನಾಶ ಮಾಡಲು ಹೊರಟಿದ್ದಾರೆ. ಬಡತನ ನಿರ್ಮೂಲನೆ ಮಾಡುವ ಬದಲು ಬಡವರನ್ನೇ ನಿರ್ಮೂಲನೆ ಮಾಡುತ್ತಿದ್ದಾರೆ. ಮೀಸಲಾತಿ ಎಲ್ಲಾ ಜನರಿಗೂ ಸಮವಾಗಿರಬೇಕು.  ಬಂಡವಾಳ ಶಾಹಿಗಳ ಪರವಾಗಿರುವ ಪ್ರಧಾನಿ ಅವೈಜ್ಞಾನಿಕವಾಗಿ ಮೀಸಲಾತಿ ತರುತ್ತಿದ್ದಾರೆ ಎಂದು ಹೇಳಿದರು.

ಸಾಧ್ಯವಾದರೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಜಾರಿಗೆ ತರಬೇಕು.  ನಮಗೆ ಬುಲೆಟ್ ಬೆಕಿಲ್ಲ, ಬ್ಯಾಲೆಟ್ ಪೇಪರ್ ನಿಂದಲೇ ಇವರನ್ನು ಆಳುವವರು ನಾವು. ಮೋದಿ ಸಂವಿಧಾನದ ಮೌಲ್ಯಗಳನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.