Asianet Suvarna News Asianet Suvarna News

ಇತರ ಧರ್ಮದವರ ಹೆಸರನ್ನು ಹೇಳಲು ಸಿಎಂ ತಡವರಿಸಿದರಾ? ಸಿಎಂ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ

ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡುವಂತ, ಕಾನೂನನ್ನು ಉಲ್ಲಂಘಿಸುವ ಯಾರೇ ಆಗಲಿ ಹಿಂದೂಗಳಾಗಲಿ ಅಥವಾ.......... ಎಂದು 8-10 ಸೆಕೆಂಡ್  ಏನು ಹೇಳಬೇಕೆಂದು ತೋಚದೇ ತಡವರಿಸಿದರು. ಆಗ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ನೆರವಿಗೆ ಧಾವಿಸಿ ಬೇರೆ ಧರ್ಮದವರು ಎಂದು ಹೇಳಿಕೊಟ್ಟರು. ಬೇರೆ ಯಾವುದೇ ಧರ್ಮದವರಾದರೂ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಕೂಡಾ ಮಾತನಾಡಿದ್ದೇನೆ

Social Media Users Express Anger on CM Statement

ಬೆಂಗಳೂರು (ಜು.08): ಆರ್’ಎಸ್ಎಸ್ ಕಾರ್ಯಕರ್ತ ಶರತ್ ಹತ್ಯೆ ಇಡೀ ರಾಜ್ಯವನ್ನೇ ಸಂಚಲನಗೊಳಿಸಿದೆ. ಇಂದು ನಡೆದ ಅವರ ಅಂತ್ಯ ಸಂಸ್ಕಾರದ ವೇಳೆ ಗಲಾಟೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಸುವ್ಯವಸ್ಥೆಯ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನೆ ಕೇಳಲಾಯಿತು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡುವಂತ, ಕಾನೂನನ್ನು ಉಲ್ಲಂಘಿಸುವ ಯಾರೇ ಆಗಲಿ ಹಿಂದೂಗಳಾಗಲಿ ಅಥವಾ.......... ಎಂದು 8-10 ಸೆಕೆಂಡ್  ಏನು ಹೇಳಬೇಕೆಂದು ತೋಚದೇ ತಡವರಿಸಿದರು. ಆಗ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ನೆರವಿಗೆ ಧಾವಿಸಿ ಬೇರೆ ಧರ್ಮದವರು ಎಂದು ಹೇಳಿಕೊಟ್ಟರು. ಬೇರೆ ಯಾವುದೇ ಧರ್ಮದವರಾದರೂ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಕೂಡಾ ಮಾತನಾಡಿದ್ದೇನೆ ಎಂದು ಹೇಳಿ ಹೊರಟು ಬಿಟ್ಟರು.

ರಾಜ್ಯದ ಮುಖ್ಯಮಂತ್ರಿಯವರು ಒಂದು ಧರ್ಮದ ಸಿಎಂ ಅಲ್ಲ. ಎಲ್ಲಾ ಧರ್ಮದವರ ಪ್ರತಿನಿಧಿಯಾಗಿ ಯಾಕೆ ಒಂದೇ ಧರ್ಮದ ಹೆಸರನ್ನು ಹೇಳಿ ಇನ್ನೊಂದು ಧರ್ಮದ ಹೆಸರನ್ನು ಹೇಳದೇ ಓಲೈಕೆ ಮಾಡುತ್ತಿದ್ದಾರಾ..? ಸಾವಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರಾ? ಇಬ್ಬಂದಿತನದ ನೀತಿ ಯಾಕೆ?  ಎಂಬ ಪ್ರಶ್ನೆಯನ್ನು ಹುಟ್ಟಿ ಹಾಕಿದೆ.  ಮುಖ್ಯಮಂತ್ರಿಯವರ  ಈ ಮಾತುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Follow Us:
Download App:
  • android
  • ios