ಸಮೀರ್‌ ತಮ್ಮ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಬಾವನು ತಮ್ಮ ಅಕ್ಕನ ಹೆಸರಿನಲ್ಲಿ ₹7 ಲಕ್ಷ ಸಾಲ ಮಾಡಿ, ಮತ್ತೊಬ್ಬಳಿಗೆ ಐಫೋನ್‌ ಖರೀದಿಸಿ, ಡಿಕೆ ಶಿವಕುಮಾರ್‌, ಸುದೀಪ್‌ ಹೆಸರು ಬಳಸಿ ಹಣ ವಸೂಲಿ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಬಾವನು ಹಣಕ್ಕಾಗಿ ಮದುವೆಯಾದದ್ದನ್ನು ಒಪ್ಪಿಕೊಂಡಿದ್ದಾನೆ. ಸಮೀರ್‌ ನ್ಯಾಯ ಕೋರಿದ್ದಾರೆ.

ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಸಮೀರ್‌ ಅವರು ಏಕಾಏಕಿ ಇನ್‌ಸ್ಟಾಗ್ರಾಮ್‌ ಲೈವ್‌ ಬಂದು, ತನ್ನ ಅಕ್ಕನ ಗಂಡ ಮಾಡಿರುವ ಮೋಸದ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ನೋಡಿ ಅನೇಕರು ಫ್ರಾಂಕ್‌ ಆಗಿರಬಹುದು ಎಂದು ಕಾಮೆಂಟ್‌ ಮಾಡಿದ್ದಾರೆ. 

ಬಾವನ ಮೇಲೆ ಮಾಡಿದ ಆರೋಪ ಏನು?
ಏಕಾಏಕಿ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಸಮೀರ್‌ ಅವರು ಬಾವನ ಮೇಲೆ ಆರೋಪ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಮೀರ್‌ ಜೊತೆಗೆ ಅವರ ಬಾವ ಕೂಡ ಇದ್ದಾರೆ. “ನನ್ನ ಅಕ್ಕನನ್ನು ಮದುವೆಯಾದರು. ಹುಡುಗಿ ಬೇಕು, ಇಷ್ಟ ಆಗಿದೆ, ಇಲ್ಲ ಅಂದ್ರೆ ಎತ್ತಾಕೊಂಡು ಹೋಗ್ತೀನಿ ಅಂತ ಹೇಳಿ ಅಕ್ಕನನ್ನು ಮದುವೆಯಾದರು. ನನ್ನ ಅಕ್ಕನ ಹೆಸರಿನಲ್ಲಿ ಏಳು ಲಕ್ಷ ರೂಪಾಯಿ ಸಾಲ ಮಾಡಿಸಿದ್ದಾನೆ. ಆಮೇಲೆ ಪೊಲೀಸರು, ಬ್ಯಾಂಕ್‌ನವರು ಮನೆಗೆ ಬಂದು ನನ್ನ ಅಕ್ಕನಿಗೆ ತೊಂದರೆ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್‌, ಕಿಚ್ಚ ಸುದೀಪ್‌ ಅವರ ಜೊತೆ ನಾನು ಕೆಲಸ ಮಾಡ್ತೀನಿ ಅಂತ ಧೈರ್ಯದಲ್ಲಿ ಏನು ಬೇಕಿದ್ರೂ ಮಾಡ್ತಾರಂತೆ. ಅವರನ್ನು ಕಾಂಟ್ಯಾಕ್ಟ್‌ ಮಾಡಸ್ತೀನಿ, ಫೋಟೋ ತೆಗೆಸಿಕೊಡ್ತೀನಿ ಅಂತ ಹೇಳಿ ಹಣ ವಸೂಲಿ ಮಾಡ್ತೀನಿ ಅಂತ ಹೇಳಿದ್ದಾರೆ. ನನ್ನ ಅಕ್ಕನ ಹೆಸರಿನಲ್ಲಿ ಸಾಲ ಮಾಡಿ ಇನ್ನೊಂದು ಹುಡುಗಿಗೆ ಐಫೋನ್‌ ಕೊಡಿಸಿದ್ದಾನೆ. ಇವನಿಗೆ ಹುಡುಗಿಯರ ಶೋಕಿ ಕೂಡ ಇದೆ. ನನ್ನ ಕಾರ್‌ ತಗೊಂಡು, ಬೇರೆ ಹುಡುಗಿಯರನ್ನು ತಿರುಗಿಸುತ್ತಾನೆ” ಎಂದು ಹೇಳಿದ್ದಾರೆ.

ಬಾವ ಏನು ಹೇಳುತ್ತಾರೆ?
ದುಡ್ಡಿಗೋಸ್ಕರ ಮದುವೆ ಮಾಡಿಕೊಂಡೆ ಅಂತ ಸಮೀರ್‌ ಬಾವ ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋದಲ್ಲಿ ಕಾಣುವಂತೆ ಹೊಡೆದಾಟ ಕೂಡ ನಡೆದಿದೆ. “ಇನ್ನು ಮಗಳ ಒಡವೆ ತಗೊಂಡು ಏನು ಮಾಡಿದೆ? ಮಾಂಗಲ್ಯ ಸರ ಏನು ಮಾಡಿದೆ?” ಎಂದೆಲ್ಲ ಸಮೀರ್‌ ಮನೆಯವರು ಪ್ರಶ್ನೆ ಮಾಡಿದ್ದಾರೆ. ಇನ್ನು ಹುಡುಗಿಯರಿಗೆ ಬಾವ ಮಾಡಿದ ಮೆಸೇಜ್‌ನ್ನು ಕೂಡ ಸಮೀರ್‌ ಅವರು ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ತೋರಿಸಿದ್ದಾರೆ. 

ವಿಡಿಯೋ ನಿಜ
“ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಓಡ್ತಿರೋದು ನಿಜ. ಇದು ಫ್ರಾಂಕ್‌ ಅಲ್ಲ. ನನ್ನ ಹೆಸರು ಹೇಳಿ ಪ್ರಮೋಶನ್‌ ಮಾಡಸ್ತೀನಿ ಅಂತ ಹಣ ವಸೂಲಿ ಮಾಡಿದ್ದರು. ಕಿಚ್ಚ ಸುದೀಪ್‌ ಹಾಗೂ ಡಿಕೆ ಶಿವಕುಮಾರ್‌ ಅವರಿಗೆ ಇವರು ಯಾರು ಅಂತ ಗೊತ್ತಿಲ್ಲ. ಇವರಿಬ್ಬರಿಗೂ ದೊಡ್ಡ ಮಟ್ಟದ ಫ್ಯಾನ್ಸ್‌ ಇರುತ್ತಾರೆ. ನನ್ನ ಹೆಸರು ಹೇಳಿದವರಿಗೆ ದುಡ್ಡು ಕೊಡಬೇಡಿ. ನನ್ನ ಅಕ್ಕನಿಗೆ ಮೋಸ ಆಗಿದೆ, ನ್ಯಾಯ ಸಿಗಬೇಕು. ಒಳ್ಳೆಯವರಿಗೆ ಒಳ್ಳೆಯದಾಗಬೇಕು” ಎಂದು ಸಮೀರ್‌ ಹೇಳಿದ್ದಾರೆ.