ಲಕ್ನೋ[ಜು.30]: ಕಚ್ಚಿದ ಹಾವನ್ನು ಹೊಡೆದು ಹತ್ಯೆ ಮಾಡುತ್ತಾರೆ. ಆದರೆ, ಯಾರಾದರೂ ಪುನಃ ಹಾವಿಗೇ ಕಚ್ಚುತ್ತಾರೆಯೇ?

ಉತ್ತರ ಪ್ರದೇಶದ ಇಟಾ ಜಿಲ್ಲೆಯ ಅಸ್ರೌಲಿ ಎಂಬ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿದ್ದ ರಾಜ್‌ ಕುಮಾರ್‌ ಎಂಬಾತ ಇಂಥದ್ದೊಂದು ದುಸ್ಸಾಹಸ ಮೆರೆದಿದ್ದಾನೆ.

ಹಾವಿನ ಮೇಲಿನ ಸಿಟ್ಟಿಗೆ ಹಾವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಆತನ ಪರಿಸ್ಥಿತಿ ಇದೀಗ ಗಂಭೀರವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.