ವಿಧಾನಸೌಧದ ಉತ್ತರದ್ವಾರದ ಹಾಲ್’ನಲ್ಲಿ ನಾಗರ ಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಧಾನಸೌಧ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.
ಬೆಂಗಳೂರು (ಫೆ.02): ವಿಧಾನಸೌಧದ ಆವರಣದಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು .
ವಿಧಾನಸೌಧದ ಉತ್ತರದ್ವಾರದ ಹಾಲ್’ನಲ್ಲಿ ನಾಗರ ಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಧಾನಸೌಧ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.
ಹಾವು ಪ್ರತ್ಯಕ್ಷದಿಂದ ಸರ್ಕಾರಕ್ಕೆ ಶನಿದೋಷ ಎದುರಾಗಿದೆಯಾ ಎಂಬ ಗುಸುಗುಸು ಸಿಬ್ಬಂದಿ ಮಧ್ಯೆ ಹರಿದಾಡುತ್ತಿತ್ತು.
ಇನ್ನು ಕೆಲ ದಿನಗಳ ಸಿಎಂ ಸಿದ್ದರಾಮಯ್ಯ ಮೇಲೆ ಕಾಗೆಯೊಂದು ಹಿಕ್ಕೆ ಹಾಕಿತ್ತು. ಇದಕ್ಕೂ ಮೊದಲು ಕಾಗೆಯೊಂದು ಸಿಎಂ ಕಾರಿನ ಮೇಲೆ ಕೂತಿತ್ತು .
ಈ ಎಲ್ಲಾ ಸೂಚ್ಯಕಗಳು ಸಿಎಂಗೆ ಶನಿ ಕಾಟ ಎದುರಾಗಿದೆಯಾ ಎಂಬ ಮಾತುಗಳು ಕೇಳಿಬಂದಿದ್ದವು.
(ಸಾಂದರ್ಭಿಕ ಚಿತ್ರ)