ನವದೆಹಲಿ[ಮೇ.31]: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಸೇರಿದಂತೆ ಒಟ್ಟು 58 ಮಂದಿ ಸಚಿವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಬೋಧನೆ ಮಾಡಿದ್ದಾರೆ. ಈ ಮೂಲಕ ಎರಡನೇ ಅವಧಿಯ ಸರ್ಕಾರ ರಚನೆಗೆ ಮೋದಿ ಟೀಂ ಸಜ್ಜಾಗಿದೆ. ಹೀಗಿರುವಾಗ ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದ ಅತ್ಯಂತ ಹಿರಿಯ ಹಾಗೂ ಕಿರಿಯ ಸಚಿವರು ಯಾರು ಎಂಬುವುದು ಭಾರೀ ಕುತೂಹಲ ಮೂಡಿಸಿದೆ.

ಗುರುವಾರ ಕೇಂದ್ರ ಸಂಪುಟ ಸೇರಿದವರ ಪೈಕಿ ಕ್ಯಾಬಿನೆಟ್‌ ಸಚಿವರಲ್ಲಿ ಸ್ಮೃತಿ ಇರಾನಿ(43) ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಇನ್ನು ಎಲ್‌ಜೆಪಿ ನಾಯಕ ರಾಮ್‌ ವಿಲಾಸ್‌ ಪಾಸ್ವಾನ್‌ (73) ಅತ್ಯಂತ ಹಿರಿಯ ಸಚಿವರಾಗಿದ್ದಾರೆ.

ಮೋದಿ ಸಂಪುಟದ ಸಚಿವರ ಸರಾಸರಿ ವಯಸ್ಸು 65 ವರ್ಷ.