Asianet Suvarna News Asianet Suvarna News

ಎಲ್ರೂ ಸೇರಿ ರಾಹುಲ್‌ಗೆ ಟ್ಯೂಷನ್ ಹೇಳ್ತಾರೆ: ವಿಡಿಯೋ!

ಮೋದಿಗೆ ಟ್ಯೂಷನ್ ಬೇಕಾ?, ರಾಹುಲ್ ಗೆ ಬೇಕಾ?| ಬಿಜೆಪಿ, ಕಾಂಗ್ರೆಸ್ ನಡುವೆ ಇದೀಗ ಟ್ಯೂಷನ್ ವಾರ್| ರಾಹುಲ್‌ಗೆ ಸಲಹೆ ನೀಡುತ್ತಿರುವ ಸಿಂಧಿಯಾ ವಿಡಿಯೋ ವೈರಲ್| ಟ್ವೀಟ್ ಮೂಲಕ ರಾಹುಲ್ ಗಾಂಧಿ ಕಾಲೆಳೆದ ಸ್ಮೃತಿ ಇರಾನಿ| ಇರಾನಿ ಟ್ವೀಟ್ ಗೆ ತಕ್ಕ ಉತ್ತರ ನೀಡಿದ ಪ್ರಿಯಾಂಕ ಚತುರ್ವೇದಿ

Smriti Irani Says Rahul Gandhi Takes Tuition To Dream
Author
Bengaluru, First Published Dec 19, 2018, 3:51 PM IST

ನವದೆಹಲಿ(ಡಿ.19): ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್, ಇದೀಗ ಮತ್ತಷ್ಟು ಚುರುಕಾಗಿದೆ.

ಮೂರು ರಾಜ್ಯಗಳಲ್ಲಿ ಸರ್ಕಾರ ರಚನೆಯಾದ ನಂತರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯ ಭಾಷಣ ಶೈಲಿ ಬದಲಾಗಿರುವುದು ನಿಜ. ಹಿಂದೆಂದಿಗಿಂತಲೂ ಹೆಚ್ಚಾಗಿ ರಾಹುಲ್ ಇದೀಗ ಪ್ರಧಾನಿ ನರೇಂದ್ರ ಮೋದಿ ಮೇಲೆ ಹರಿಹಾಯುತ್ತಿದ್ದಾರೆ.

ಈ ಮಧ್ಯೆ ಸಂಸತ್ತಿನ ಹೊರಗೆ ಸುದ್ದಿಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಮಾತನಾಡುವ ಸಂದರ್ಭದಲ್ಲಿ, ಗುಲಾಂ ನಬಿ ಆಜಾದ್‌, ಅಹ್ಮದ್‌ ಪಟೇಲ್‌ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ರಾಹುಲ್ ಗೆ ಏನು ಮಾತನಾಡಬೇಕು ಎಂಬ ಕುರಿತು ಸಲಹೆ ನೀಡುತ್ತಿರುವುದು ರೆಕಾರ್ಡ್ ಆಗಿದೆ.

ರೈತರ ಸಾಲಮನ್ನಾ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ, ‘ಪಿಎಂ ಮೋದಿ ಮಾಡಲಾರದ್ದನ್ನು ನಾನು ಮಾಡಿ ತೋರಿಸಿದ್ದೇನೆ’ ಎಂದು ಹೇಳುವಂತೆ ಸಿಂಧಿಯಾ ಸಲಹೆ ನೀಡುತ್ತಿರುವುದು ಮಾಧ್ಯಮಗಳ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.

ಈ ವೀಡಿಯೋವನ್ನು ಬಳಸಿಕೊಂಡು ಕಾಂಗ್ರೆಸ್‌ಗೆ ಮುಜುಗರ ತರಲು ಬಿಜೆಪಿ ಮುಂದಾಗಿದೆ. ಬಿಜೆಪಿ ನಾಯಕಿ ಸ್ಮೃತಿ ಇರಾನಿ ಈ ಕುರಿತು ಟ್ವೀಟ್ ಮಾಡಿದ್ದು, 'ಇತ್ತೀಚೆಗೆ ಕನಸು ಕಾಣುವುದಕ್ಕೂ ನಿಮಗೆ ಟ್ಯೂಷನ್‌ ಬೇಕಾಗಿದೆ' ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಸ್ಮೃತಿ ಇರಾನಿ ವಿಡಿಯೋಗೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ, ‘ನೀವು ಪ್ರಧಾನಿ ಮೋದಿ ಅವರಿಗೆ ಕನಿಷ್ಠ ಒಂದಾದರೂ ಸುದ್ದಿಗೋಷ್ಠಿ ನಡೆಸಲು ಹೇಳಿ, ಟ್ಯೂಷನ್ ಸಹಾಐ ಇಲ್ಲದೇ ಮೋದಿ ಮಾತಾಡಲಿ ಎಂದು ಕಾಲೆಳೆದಿದ್ದಾರೆ.

Follow Us:
Download App:
  • android
  • ios