ಇಂದು 5 ಗಂಟೆ ಸುಮಾರಿಗೆ ಮೋತಿ ಬಾಗ್ ಫ್ಲೈ-ಓವರ್ ಬಳಿ ಸ್ಮೃತಿ ಇರಾನಿಯವರ ಕಾರನ್ನು ಇನ್ನೊಂದು ಕಾರು ಹಿಂಬಾಲಿಸಿದೆ
ನವದೆಹಲಿ (ಎ.01): ತನ್ನ ಕಾರನ್ನು ಹಿಂಬಾಲಿಸಿ, ಓವರ್’ಟೆಕ್ ಮಾಡಲು ಪ್ರಯತ್ನಿಸಿದ್ದಾರೆಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.
ಇಂದು 5 ಗಂಟೆ ಸುಮಾರಿಗೆ ಮೋತಿ ಬಾಗ್ ಫ್ಲೈ-ಓವರ್ ಬಳಿ ಸ್ಮೃತಿ ಇರಾನಿಯವರ ಕಾರನ್ನು ಇನ್ನೊಂದು ಕಾರು ಹಿಂಬಾಲಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
