ಇನ್ನೊಂದು ಮೂಲಗಳ ಪ್ರಕಾರ ಎಸ್'ಎಂಕೆ ಫೆ.6 ರಂದು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದು..

ಬೆಂಗಳೂರು(ಜ.28): ಕಾಂಗ್ರೆಸ್'ಗೆ ಗುಡ್'ಬಾಯ್ ಹೇಳಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಗ್ಗೆ ಮತ್ತೊಂದು ಗುಸುಗುಸು ಹರಿದಾಡುತ್ತಿದೆ. ಪ್ರಸ್ತುತ ರಾಜಕೀಯ ನಾಯಕರು ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎನ್ನುವುದು ಎಲ್ಲಡೆ ಹರಿದಾಡುತ್ತಿರುವ ವಿಷಯ.

ಇನ್ನೊಂದು ಮೂಲಗಳ ಪ್ರಕಾರ ಎಸ್'ಎಂಕೆ ಫೆ.6 ರಂದು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದು, ಆ ದಿನವೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಕಾರ್ಯಕ್ರಮಗಳಿವೆ. ಪ್ರಧಾನಿಯವರನ್ನು ಭೇಟಿಯಾಗುವ ಕಾರಣದಿಂದ ಬಿಜೆಪಿ'ಗೆ ಸೇರಬಹುದೆಂಬ ಸುದ್ದಿ ಕೇಳಿಬರುತ್ತಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಜ.29 ರಂದು 11 ಗಂಟೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ರಾಜೀನಾಮೆಗೆ ವಾಸ್ತವ ಕಾರಣವನ್ನು ತಿಳಿಸುವ ಸಾಧ್ಯತೆಯಿದೆ. 1999 ರಿಂದ 2004 ರವರೆಗೆಕಾಂಗ್ರೆಸ್'ನಿಂದಮುಖ್ಯಮಂತ್ರಿಯಾಗಿದ್ದಅವರುತದನಂತರಮಹಾರಾಷ್ಟ್ರದರಾಜ್ಯಪಾಲಹಾಗೂಯುಪಿಎಆಡಳಿತದಲ್ಲಿವಿದೇಶಾಂಗಸಚಿವರಾಗಿಕಾರ್ಯನಿರ್ವಹಿಸಿದ್ದರು