ಇತ್ತ ಫಲಿತಾಂಶದ ಬಿಸಿ : ಅತ್ತ ಕೇಂದ್ರ ಸಂಪುಟಕ್ಕೆ ಸರ್ಜರಿ

First Published 15, May 2018, 6:04 AM IST
Small Reshuffle  In Modi Cabinet
Highlights

ಪ್ರಧಾನಿ ನರೇಂದ್ರ ಮೋದಿ ಸಂಪುಟವನ್ನು ಸಣ್ಣ ಪ್ರಮಾಣದಲ್ಲಿ ಪುನರ್ ರಚಿಸಲಾಗುತ್ತಿದೆ. ಕಿಡ್ನಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿರುವ ಅರುಣ್ ಜೇಟ್ಲಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಹಣಕಾಸು ಖಾತೆ ಹೊಣೆಯನ್ನು ರೈಲ್ವೆ ಸಚಿವ 
ಪಿಯೂಷ್ ಗೋಯೆಲ್ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಜೇಟ್ಲಿ ಚೇತರಿಕೆವರೆಗೂ ಈ ಹೊಣೆ ಹೊರಲಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟವನ್ನು ಸಣ್ಣ ಪ್ರಮಾಣದಲ್ಲಿ ಪುನರ್ ರಚಿಸಲಾಗುತ್ತಿದೆ. ಕಿಡ್ನಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿರುವ ಅರುಣ್ ಜೇಟ್ಲಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಹಣಕಾಸು ಖಾತೆ ಹೊಣೆಯನ್ನು  ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಜೇಟ್ಲಿ ಚೇತರಿಕೆವರೆಗೂ ಈ ಹೊಣೆ ಹೊರಲಿದ್ದಾರೆ.

ಇದೇ ವೇಳೆ ಇತ್ತೀಚಿನ ಹಲವು ವಿವಾದಗಳ ಹಿನ್ನೆಲೆಯಲ್ಲಿ ಸ್ಮತಿ ಇರಾನಿ ಅವರಿಂದ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ಹಿಂಪಡೆಯಲಾಗಿದೆ. ಈ ಖಾತೆಯನ್ನು ಇದುವರೆಗೆ ಇದೇ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ವಹಿಸಲಾಗಿದೆ. ಇದರೊಂದಿಗೆ 2ನೇ ಬಾರಿ ಇರಾನಿ ಅವರನ್ನು ಪ್ರಮುಖ ಸಚಿವ ಸ್ಥಾನದಿಂದ ಕೈಬಿಡಲಾಗಿದೆ. 

ಎಚ್ ಆರ್‌ಡಿ ಸಚಿವಾಲಯದಿಂದ ಅವರನ್ನು ಜವಳಿ ಸಚಿವಾಲಯಕ್ಕೆ ವರ್ಗಾಯಿಸಲಾಗಿತ್ತು. ಬಳಿಕ ಹೆಚ್ಚುವರಿಯಾಗಿ ಅವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ವಹಿಸಲಾಗಿತ್ತು. ಇದೀಗ ಅದನ್ನೂ ಕಿತ್ತುಕೊಳ್ಳಲಾಗಿದೆ. ಹೀಗಾಗಿ ಅವರನ್ನು ಜವಳಿ ಸಚಿವೆಯಾಗಿ ಮಾತ್ರ  ಮುಂದುವರಿಯಲಿದ್ದಾರೆ. ಇದೇ ವೇಳೆ ರಾಜ್ಯ ಸಚಿವ ಎಸ್.ಎಸ್. ಅಹ್ಲುವಾಲಿಯ ಅವರನ್ನು ಕುಡಿಯುವ ನೀರು ಮತ್ತು ಸ್ವಚ್ಛತಾ ಸಚಿವಾಲಯದಿಂದ ಕೈಬಿಟ್ಟು, ಅವರಿಗೆ ಹೊಸದಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಸ್ಥಾನ ನೀಡಲಾಗಿದೆ. 

ಮತ್ತೋರ್ವ ರಾಜ್ಯ ಸಚಿವ ಅಲ್ಫೋನ್ಸ್ ಕಣ್ಣನ್‌ಥಾನಂ ಅವರನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಕೈಬಿಡಲಾಗಿದ್ದು, ಅವರ ಪ್ರವಾಸೋದ್ಯಮ ಸಚಿವರಾಗಿ ಮುಂದುವರಿಯುತ್ತಾರೆ.

loader