ಬೆಂಗಳೂರು [ಜು.27]:  ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ಜೇಬಿನಿಂದ ಕವರ್‌ವೊಂದನ್ನು ತೆಗೆದು ಕೊಟ್ಟಿದ್ದೇನು ಎಂಬ ಕುತೂಹಲ ಕೆರಳಿಸಿತು. 

ಗಾಜಿನಮನೆಗೆ ಆಗಮಿಸಿದ ಯಡಿಯೂರಪ್ಪ ಅವರೊಂದಿಗೆ ಮಾತನಾಡಿ ಹಸ್ತಲಾಘವ ಮಾಡಿದ ಎಸ್.ಎಂ.ಕೃಷ್ಣ ತಾವು ತಂದಿದ್ದ ಪುಟ್ಟ ಕವರೊಂದನ್ನು ಜೇಬಿನಿಂದ ತೆಗೆದು ನೀಡಿದ್ದು ನೋಡುಗರ ಗಮನ ಸೆಳೆಯಿತು. 

ಯಡಿಯೂರಪ್ಪ ಅವರಿಗೆ ನೀಡಿದ್ದು ದೇವರ ಪ್ರಸಾದ ಎಂದು ಹೇಳಲಾಗಿದೆ. ಮೈಸೂರಿನ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ತಮ್ಮ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು ಎಂದು ಹೇಳಲಾಗಿದೆ. ಹೀಗಾಗಿ ಅದನ್ನೇ ಕೊಟ್ಟರು ಎನ್ನಲಾಗಿದೆ