ಎಸ್.ಎಂ.ಕೆ ಮಾಜಿ ಬಾಡಿಗಾರ್ಡ್ಸ್ ಸ್ಪರ್ಧೆ

First Published 6, Mar 2018, 12:24 PM IST
SM Krishna Former BodyGuards Contest Election
Highlights

ಬಿಜೆಪಿಯಿಂದ ಹಾಲಿ ಶಾಸಕ ಮುನಿರಾಜು ಅವರಿಗೆ ಟಿಕೆಟ್ ದೊರೆಯಲಿದೆ. ಜೆಡಿಎಸ್‌ನಿಂದ ಮಂಜುನಾಥ್‌ಗೆ ಟಿಕೆಟ್ ಸಿಕ್ಕಿದೆ. ಇವರು ಮಾಜಿ ಸಿಎಂ ಎಸ್. ಎಂ.ಕೃಷ್ಣ ಅವರಿಗೆ ಅಂಗರಕ್ಷಕರಾಗಿದ್ದರು

ದಾಸರಹಳ್ಳಿ : ಬಿಜೆಪಿಯಿಂದ ಹಾಲಿ ಶಾಸಕ ಮುನಿರಾಜು ಅವರಿಗೆ ಟಿಕೆಟ್ ದೊರೆಯಲಿದೆ. ಜೆಡಿಎಸ್‌ನಿಂದ ಮಂಜುನಾಥ್‌ಗೆ ಟಿಕೆಟ್ ಸಿಕ್ಕಿದೆ. ಇವರು ಮಾಜಿ ಸಿಎಂ ಎಸ್. ಎಂ.ಕೃಷ್ಣ ಅವರಿಗೆ ಅಂಗರಕ್ಷಕರಾಗಿದ್ದರು.

ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಎಲ್. ಶಂಕರ್ ಅವರನ್ನು ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸುವಂತೆ ಪಕ್ಷ ಓಲೈಸಿದೆ. ಆದರೆ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂಬ ಕಾರಣಕ್ಕೆ ಈ ಕ್ಷೇತ್ರದ ಮೇಲೂ ಅವರು ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಪಿ.ಎನ್. ಕೃಷ್ಣಮೂರ್ತಿ ಕೂಡ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಕೃಷ್ಣಮೂರ್ತಿ ಅಲ್ಲಿ ನನ್ನ ಬೆಂಬಲ ಬೇಕಾದರೆ ದಾಸರಹಳ್ಳಿಯಲ್ಲಿ ಟಿಕೆಟ್ ಕೊಡಿಸಿ ಎಂದು ಪರಮೇಶ್ವರ್ ಬೆನ್ನು ಹತ್ತಿದ್ದಾರೆ ಎಂಬ ಮಾಹಿತಿಗಳಿವೆ. ಇವರಲ್ಲದೆ, ಸೌಂದರ್ಯ ಮಂಜಪ್ಪ, ಉಮೇಶ್ ಬೋರೇಗೌಡ, ಅಮೃತ್‌ಗೌಡ, ಕೆ.ಸಿ. ಅಶೋಕ್ ಪ್ರಯತ್ನಿಸುತ್ತಿದ್ದಾರೆ.

loader