ಆಸಗ್ಟ್ 14ರಿಂದ ಸ್ಥಗಿತವಾಗಿದ್ದ ಬೆಂಗಳೂರು - ಮಂಗಳೂರು ರಾಜಹಂಸ ಸ್ಲೀಪರ್ ಬಸ್ ಸಂಚಾರ ಇದೀಗ ಪುನರಾರಂಭವಾಗಿದೆ.

ಬೆಂಗಳೂರು : ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಆ.14ರಿಂದ ಸ್ಥಗಿತಗೊಂಡಿದ್ದ ರಾಜಹಂಸ ಮತ್ತು ಸ್ಲೀಪರ್‌ ಕೋಚ್‌ ಬಸ್‌ ಸೇವೆಯನ್ನು ಕೆಎಸ್‌ಆರ್‌ಟಿಸಿ ಸೋಮವಾರದಿಂದ ಪುನರಾರಂಭಿಸಿದೆ.

ಚಾರ್ಮಾಡಿ ಘಾಟ್‌ ಮುಖಾಂತರ ಮಂಗಳೂರಿಗೆ 29 ರಾಜಹಂಸ ಮತ್ತು ಸ್ಲೀಪರ್‌ ಕೋಚ್‌ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಪ್ರಾರಂಭಿಸಿದೆ. ಜೊತೆಗೆ ಕುದುರೆಮುಖ ಮಾರ್ಗವಾಗಿ ಕುಂದಾಪುರಕ್ಕೆ ಎರಡು ಐರಾವತ ಕ್ಲಬ್‌ ಕ್ಲಾಸ್‌ ಬಸ್‌, ಕಾಸರಗೋಡು ಹೊರತುಪಡಿಸಿ ಕೇರಳಕ್ಕೆ ಬಸ್‌ ಸಂಚಾರ ಪುನರಾರಂಭಿಸಲಾಗಿದೆ. ಮಡಿಕೇರಿ ಹಾಗೂ ಕುಶಾಲನಗರ ಕಡೆಗೂ ಆ.20ರಂದು 19 ಬಸ್‌ ಕಾರ್ಯಾಚರಣೆಗೊಳಿಸಲಾಗಿದೆ.

ಆದರೆ, ಮಂಗಳೂರು, ಕುಂದಾಪುರ, ಪುತ್ತೂರು, ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ, ಶೃಂಗೇರಿ, ಉಡುಪಿ, ಧರ್ಮಸ್ಥಳ ಸೇರಿದಂತೆ ವಿವಿಧ ಸ್ಥಳಗಳಿಗೆ ಹೋಗುತ್ತಿದ್ದ 39 ಬಸ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.